ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರುಕ್ ಖಾನ್ ನಿರ್ಮಾಣದ‌ ಕ್ರ್ಯೆಂ ಥ್ರಿಲ್ಲರ್ ಸಿನಿಮಾದಲ್ಲಿ ಭೂಮಿ ಫಡ್ನೇಕರ್

Last Updated 13 ಅಕ್ಟೋಬರ್ 2021, 14:35 IST
ಅಕ್ಷರ ಗಾತ್ರ

ಬೆಂಗಳೂರು; ನಟ ಶಾರುಕ್ಖಾನ್ ಅವರು ತಮ್ಮ ಮಗ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಕೊಂಡಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ ಎಂಬ ವರದಿಗಳು ಬಂದಿದ್ದು, ಏತನ್ಮಧ್ಯೆ ಅವರು ತಮ್ಮ ಮುಂದಿನ ಸಿನಿಮಾ ನಿರ್ಮಾಣದ ವಿಷಯದಲ್ಲಿಯೂ ಗಮನ ಹರಿಸಿದ್ದಾರೆ.

ಶಾರುಕ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಕಂಪನಿ ನಿರ್ಮಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾ‘ಭಕ್ಸಕ್’ ಸೆಟ್ಟೆರಲು ಸಜ್ಜಾಗಿದೆ. ನಾಯಕಿ ಪ್ರಧಾನ ಕಥೆ ಹೊಂದಿರುವ ‘ಭಕ್ಸಕ್’ನಲ್ಲಿ ಬಾಲಿವುಡ್ ನಟಿ ಭೂಮಿ ಫಡ್ನೇಕರ್ ನಾಯಕಿ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಈ ಚಿತ್ರದಲ್ಲಿ ಭೂಮಿ ಫಡ್ನೇಕರ್ ತನಿಖಾ ವರದಿ ಮಾಡುವ ಪತ್ರಕರ್ತೆ ಪಾತ್ರ ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾವನ್ನು ‘ಬೋಸ್:ಡೆಡ್ ಆರ್ ಅಲೈವ್’ ನಿರ್ದೇಶಿಸಿದ್ದ ಪುಲ್ಕಿತ್ ಅವರು ನಿರ್ದೇಶಿಸಲಿದ್ದಾರೆ.

ಭಕ್ಸಕ್ 2022 ರಿಂದ ಚಿತ್ರೀಕರಣ ಆರಂಭಿಸಲಿದ್ದು, ನಟಅರ್ಜುನ್ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಬಿಹಾರದಲ್ಲಿ ಬಾಲಕಿಯರನ್ನು ಅಪಹರಿಸಿ ಅವರನ್ನು ವೇಶ್ಯಾವೃತ್ತಿಗೆ ತಳ್ಳುವ ಕಥಾ ಹಂದರವನ್ನುಭಕ್ಸಕ್ ಹೊಂದಿದೆ.

ಇನ್ನು ಭೂಮಿ ಫಡ್ನೇಕರ್ ಹಾಗೂ ಅವರ ತಂಗಿ ನಟಿ ಸಮೀಕ್ಷಾ ಪಡ್ನೇಕರ ಇತ್ತೀಚೆಗೆ ಸ್ಪೇನ್ ನಲ್ಲಿ ನಡೆಸಿದ ಹಾಟ್ ಫೋಟೊ ಶೂಟ್ ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT