ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಚ್ಚುಗತ್ತಿ’ ಚಿತ್ರೀಕರಣ ಮುಕ್ತಾಯ

Last Updated 30 ಏಪ್ರಿಲ್ 2019, 11:44 IST
ಅಕ್ಷರ ಗಾತ್ರ

ಸಾಹಿತಿ ಬಿ.ಎಲ್. ವೇಣು ಅವರ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತ ಚಲನಚಿತ್ರ ‘ಬಿಚ್ಚುಗತ್ತಿ’ಯ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಐತಿಹಾಸಿಕ ಸಿನಿಮಾ. ಈ ಚಿತ್ರಕ್ಕೆ ಚಿತ್ರಕಥೆಯನ್ನು ವೇಣು ಅವರೇ ಬರೆದಿದ್ದಾರೆ.

ಚಿತ್ರದ ನಿರ್ದೇಶನದ ಹೊಣೆ ಹೊತ್ತವರು ಹರಿ ಸಂತೋಷ್. ಇದರಲ್ಲಿ ಹರಿಪ್ರಿಯಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಅವರು ಚಿತ್ರದ ನಾಯಕ.

ಎಡ್ವರ್ಡ್ ಕೆನಡಿ ಅವರು ಈ ಚಿತ್ರದ ಕಲಾ ನಿರ್ದೇಶಕರಾಗಿದ್ದಾರೆ. ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಬಿಚ್ಚುಗತ್ತಿ ಭರಮಣ್ಣ ನಾಯಕ ನಡೆಸಿದ ದಂಗೆ ಈ ಸಿನಿಮಾದ ಕಥೆ. ಭರಮಣ್ಣ ನಾಯಕ ಚಿತ್ರದುರ್ಗ ಸೀಮೆಯಲ್ಲಿ ಬಹಳ ಜನಪ್ರಿಯ ವ್ಯಕ್ತಿ. ಆತನ ವ್ಯಕ್ತಿತ್ವ ಭಕ್ತಿ ಹಾಗೂ ಶಕ್ತಿಯ ಸಂಗಮ’ ಎನ್ನುವುದು ವೇಣು ಅವರ ಹೇಳಿಕೆ.

ಈ ಚಿತ್ರದಲ್ಲಿ ನವರಸಗಳು ಇರಲಿವೆ. ಭರಮಣ್ಣ ಹಾಗೂ ಮುದ್ದಣ್ಣನ ಮುಖಾಮುಖಿ ಕೂಡ ಇದರಲ್ಲಿ ಇರಲಿದೆ ಎಂದು ವೇಣು ಅವರು ಈ ಹಿಂದೆ ಒಮ್ಮೆ ತಿಳಿಸಿದ್ದರು. ‘ಇತಿಹಾಸ, ಸಾಹಿತ್ಯ ಹಾಗೂ ಸಿನಿಮಾ ಒಂದೇ ಅಲ್ಲ. ಹಾಗಾಗಿ, ಭರಮಣ್ಣನ ಕಥೆಯನ್ನು ಸಿನಿಮಾ ರೂಪದಲ್ಲಿ ಹೇಳುವಾಗ ಸಿನಿಮ್ಯಾಟಿಕ್‌ ಅಂಶಗಳನ್ನು ಸೇರಿಸಿಕೊಳ್ಳಲಾಗುತ್ತದೆ’ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.

ಈ ಸಿನಿಮಾ ಎರಡು ಅಧ್ಯಾಯಗಳಲ್ಲಿ ಮೂಡಿಬರಲಿದೆಯಂತೆ. ಮೊದಲ ಅಧ್ಯಾಯವು ದಳವಾಯಿ ದಂಗೆಯ ಕಥೆ ಹೇಳಲಿದೆ ಎಂದು ಸಿನಿಮಾ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT