ಮಂಗಳವಾರ, ನವೆಂಬರ್ 19, 2019
28 °C
ಅ.20ರಿಂದ ಬಿಗ್‌ಬಾಸ್‌ ಶುರು

ನಟ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ 7ನೇ ಆವೃತ್ತಿಯ ಪ್ರೋಮೊ ಬಿಡುಗಡೆ

Published:
Updated:
Prajavani

ನಟ ಸುದೀಪ್‌ ನಡೆಸಿಕೊಡಲಿರುವ ಬಿಗ್‌ಬಾಸ್‌ ಕಾರ್ಯಕ್ರಮದ ಪ್ರೋಮೊವನ್ನು ಶನಿವಾರ ಬಿಡುಗಡೆ ಮಾಡಲಾಯಿತು. 

ಕಿರುತೆರೆಯ ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿರುವ ಬಿಗ್‌ಬಾಸ್‌ 7ನೇ ಆವೃತ್ತಿಯ ರಿಯಾಲಿಟಿ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್‌ 20ರಂದು ಆರಂಭವಾಗಲಿದೆ.

ಬಿಗ್‌ಬಾಸ್‌ ಸೀಸನ್‌ 5 ಮತ್ತು 6ರಲ್ಲಿ ಜನಸಾಮಾನ್ಯರೂ ಸ್ಪರ್ಧಿಗಳಾಗಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಈ ಬಾರಿಯ ಆವೃತ್ತಿಯಲ್ಲಿ ಸೆಲೆಬ್ರಿಟಿಗಳು ಮಾತ್ರ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿಯೂ ಇರಲಿದೆ. ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಕುತೂಹಲದ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಡಲಿಲ್ಲ.

ಪ್ರತಿ ಎಪಿಸೋಡ್‌ ಕೂಡ ಹೆಚ್ಚು ಅರ್ಥ ಪೂರ್ಣ ಮತ್ತು ಮನರಂಜನಾತ್ಮಕವಾಗಿರುವಂತೆ ಬಿಗ್‌ಬಾಸ್‌ ಕಾರ್ಯಕ್ರಮ ರೂಪಿಸಲು ಒತ್ತುಕೊಟ್ಟಿದ್ದೇವೆ. ಸಿನಿಮಾ, ಕಿರುತೆರೆ ಮತ್ತು ರಾಜಕೀಯರಂಗದ 15 ಮಂದಿ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ಕಳೆದ ಬಾರಿ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್‌ ಈ ಬಾರಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಬಿಡದಿ ಬಳಿಯ ಬಿಗ್‌ಬಾಸ್‌ ಮನೆಯ ಸೆಟ್‌ನಲ್ಲೇ ರಿಯಾಲಿಟಿ ಶೋ ನಡೆಯಲಿದೆ.

ಜನರ ನಿರೀಕ್ಷೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ನೋಡಿದರೆ, ನಮಗೂ ಒಂದು ರೀತಿಯ ಆತಂಕ ಕಾಡುತ್ತಿದೆ. ಕಾರ್ಯಕ್ರಮದಲ್ಲಿ ಹೊಸತನ ಕಾಯ್ದುಕೊಳ್ಳುವ ಸವಾಲು ನಮ್ಮ ಮುಂದಿದೆ. ಹಾಗೆಯೇ ವೀಕ್ಷಕರಿಗೆ ಬೋರೆನಿಸದ ರೀತಿಯಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯುವಂತೆ ಮಾಡುವ, ಸದಭಿರುಚಿಯ ಮನರಂಜನೆ ಒದಗಿಸುವ ದೊಡ್ಡ ಜವಾಬ್ದಾರಿ ಬಿಗ್‌ಬಾಸ್‌ ಮನೆಗೆ ಇದೆ ಎನ್ನುತ್ತಾರೆ ಕಲರ್ಸ್‌ ಕನ್ನಡ ಬ್ಯಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌. 

ಪ್ರತಿಕ್ರಿಯಿಸಿ (+)