ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಕೇಂದ್ರವಾಗಿ ಇರಿಸಿಕೊಂಡು ಇಂಗ್ಲಿಷ್ನಲ್ಲಿ ಹಲವು ಸಿನಿಮಾಗಳು ಬಂದಿವೆ. ಇದೇ ರೀತಿ, ಬಾಂಡ್ ಸರಣಿಯ ಚಿತ್ರಗಳೂ ಬಂದಿವೆ. ಅವು ಯಶಸ್ಸು ಕಂಡಿವೆ ಕೂಡ. ಹೀಗಿರುವಾಗ, ಕನ್ನಡದಲ್ಲಿ ಒಂದೇ ಪಾತ್ರವನ್ನು ಕೇಂದ್ರವಾಗಿ ಇರಿಸಿಕೊಂಡು ಸರಣಿ ಸಿನಿಮಾಗಳನ್ನು ಮಾಡಬಾರದೇಕೆ ಎಂಬ ಆಲೋಚನೆ ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರಲ್ಲಿ ಬಂದಿತ್ತು.

ಈ ಆಲೋಚನೆಯ ಫಲ ‘ಬೀರ್ಬಲ್’ ಸಿನಿಮಾ. 2019ರಲ್ಲಿ ತೆರೆಕಂಡ ಈ ಸಿನಿಮಾ ಈಗ ಅಮೆಜಾನ್ ಪ್ರೈಮ್ನಲ್ಲಿ ಕೂಡ ಲಭ್ಯವಿದೆ. ಈಗ ಶ್ರೀನಿವಾಸ್ ಅವರು ಈ ಸರಣಿಯ ಎರಡನೆಯ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಕಥೆ ಅವರ ಬಳಿ ಸಿದ್ಧವಿದೆ. ಚಿತ್ರಕಥೆಯ ಕೆಲಸ ನಡೆದಿದೆ.

‘ಬೀರ್ಬಲ್ ಸಿನಿಮಾ ಮೂರು ಭಾಗಗಳಲ್ಲಿ ಮೂಡಿಬರಲಿದೆ ಎಂಬುದನ್ನು ನಾನು ಮೊದಲೇ ಹೇಳಿದ್ದೆ. ಮೊದಲ ಭಾಗದ ಹೆಸರು ಫೈಂಡಿಂಗ್ ವಜ್ರಮುನಿ. ಇದು ಈಗಾಗಲೇ ವೀಕ್ಷಕರ ಮುಂದೆ ಇದೆ. ಎರಡನೆಯ ಭಾಗದ ಹೆಸರು ಅವರನ್ ಬಿಟ್ ಇವರನ್ ಬಿಟ್ ಇವರ್ಯಾರು ಎಂದು. ಮೂರನೆಯ ಭಾಗಕ್ಕೆ ತುರೇಮಣೆ ಎಂಬ ಶೀರ್ಷಿಕೆ ಇತ್ತಿದ್ದೇವೆ’ ಎಂದು ತಿಳಿಸಿದರು ಶ್ರೀನಿವಾಸ್.

ಶ್ರೀನಿವಾಸ್ ಅವರು ಈಗ ‘ಓಲ್ಡ್ ಮಾಂಕ್’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಂಡ ತಕ್ಷಣ ಬೀರ್ಬಲ್ ಸರಣಿಯ ಎರಡನೆಯ ಸಿನಿಮಾದ ಚಿತ್ರೀಕರಣ ಶುರುವಾಗಲಿದೆಯಂತೆ.

‘ಇದು ಮೊದಲ ಭಾಗದಲ್ಲಿ ಹೇಳಿದ್ದ ಕಥೆಯನ್ನು ಮುಂದುವರಿಸುವ ರೂಪದಲ್ಲಿ ಇರುವುದಿಲ್ಲ. ಎರಡನೆಯ ಭಾಗದಲ್ಲಿ ಪ್ರತ್ಯೇಕ ಕಥೆ ಇರುತ್ತದೆ. ಹಿಂದಿನ ಕಥೆಗೂ ಇದರಲ್ಲಿ ಇರುವ ಕಥೆಗೂ ಸಂಬಂಧ ಇರುವುದಿಲ್ಲ. ಆದರೆ, ಪಾತ್ರಗಳು ಮಾತ್ರ ಹಿಂದಿನ ಭಾಗದಲ್ಲಿ ಇದ್ದವೇ ಆಗಿರುತ್ತವೆ’ ಎಂದರು ಶ್ರೀನಿವಾಸ್.

ಇದರಲ್ಲಿ ಇರುವುದು ಕೂಡ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಥ್ರಿಲ್ಲರ್ ಕಥೆ. ‘ಎರಡನೆಯ ಭಾಗವನ್ನು ಸಿನಿಮಾ ರೂಪದಲ್ಲಿ ತರಲು ಇದು ಸೂಕ್ತ ಸಮಯ ಎಂದು ನಮಗೆ ಅನ್ನಿಸಿತು. ಏಕೆಂದರೆ, ಮೊದಲ ಭಾಗವನ್ನು ಈಗ ಸಿನಿಮಾ ಪ್ರೇಮಿಗಳೆಲ್ಲರೂ ನೋಡಿದ್ದಾರೆ. ಹೀಗಿರುವಾಗ, ಮುಂದಿನ ಭಾಗವನ್ನು ತಕ್ಷಣ ಅವರ ಮುಂದೆ ಇರಿಸಬೇಕಾಗುತ್ತದೆ. ಒಟಿಟಿ ಮೂಲಕ ಮೊದಲ ಭಾಗವನ್ನು ವೀಕ್ಷಕರ ಮುಂದೆ ಇರಿಸಿದಾಗ, ಅವರಿಂದ ದೊರೆತ ಪ್ರತಿಕ್ರಿಯೆಯನ್ನು ಗಮನಿಸಿ, ಈಗಲೇ ಎರಡನೆಯ ಭಾಗವನ್ನು ಮಾಡಬೇಕು ಎಂದು ಅನ್ನಿಸಿತು’ ಎಂದರು.

ಎರಡನೆಯ ಭಾಗದ ಕಥೆಯು ಬೆಂಗಳೂರಿನಲ್ಲಿ ನಡೆಯುತ್ತದೆ. ಈಗ ಸಿದ್ಧಪಡಿಸಿರುವ ಚಿತ್ರಕಥೆಯಲ್ಲಿ ತುಸು ಮಾರ್ಪಾಡುಗಳು ಆಗುವ ಸಾಧ್ಯತೆ ಇದೆಯಂತೆ. ಹಿರಿಯ ವಕೀಲನ ಪಾತ್ರ ನಿಭಾಯಿಸಿದ್ದ ಸುರೇಶ್ ಹೆಬ್ಳೀಕರ್ ಅವರೂ ಇದರಲ್ಲಿ ಇರಲಿದ್ದಾರೆ.

‘ಒಂದು ಪಾತ್ರವನ್ನು ನೆಚ್ಚಿಕೊಂಡು, ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಟ್ರಯಾಲಜಿ ಮಾಡುವುದು ದೊಡ್ಡದೊಂದು ಪ್ರಯೋಗ. ಇದಕ್ಕೆ ಯಾವ ರೀತಿಯ ಸ್ಪಂದನ ಸಿಗಬಹುದು ಎಂಬುದು ನಮಗೆ ಪೂರ್ತಿಯಾಗಿ ಗೊತ್ತಿಲ್ಲ. ನಾವು ಯಶಸ್ಸು ಕಾಣಬಹುದು. ಅಥವಾ ಸೋಲಬಹುದು. ಮೊದಲ ಭಾಗಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವ ಕಾರಣ, ಎರಡನೆಯ ಭಾಗದತ್ತ ಮುಖ ಮಾಡುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡನೆಯ ಭಾಗದ ನಿರ್ಮಾಣಕ್ಕೆ ಟಿ.ಆರ್. ಚಂದ್ರಶೇಖರ್ ಅವರು ಹಣ ಹೂಡುತ್ತಿದ್ದಾರೆ. ಇದು ದೊಡ್ಡ ಬಜೆಟ್ಟಿನ ಸಿನಿಮಾ ಆಗಿರಲಿದೆ ಎಂದು ಶ್ರೀನಿವಾಸ್ ಹೇಳುತ್ತಾರೆ.

ಬೀರಬಲ್ ಸರಣಿಯ ಎರಡನೆಯ ಸಿನಿಮಾ ಪೋಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.