ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಲ್ಯಾಕ್‌ ರೋಸ್’ ಫಸ್ಟ್‌ಲುಕ್‌: ಗಮನ ಸೆಳೆದ ಊರ್ವಶಿ ರೌಟೆಲಾ

Last Updated 24 ಸೆಪ್ಟೆಂಬರ್ 2020, 10:11 IST
ಅಕ್ಷರ ಗಾತ್ರ

ಗ್ಲಾಮರಸ್ ಪಾತ್ರ ಹಾಗೂ ಬೋಲ್ಡ್ ಅಭಿನಯದ ಮೂಲಕ ಹೆಸರು ಗಳಿಸಿರುವ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲಾ ‘ಬ್ಲ್ಯಾಕ್‌ ರೋಸ್’ ಸಿನಿಮಾದ ಮೂಲಕ ಟಾಲಿವುಡ್‌ಗೆ ಕಾಲಿರಿಸುತ್ತಿದ್ದಾರೆ. ಈ ಸಿನಿಮಾವು ಹಿಂದಿ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಈಗ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು ಊರ್ವಶಿ ನೋಟಕ್ಕೆ ಫಿದಾ ಆಗಿದ್ದಾರೆ ಸಿನಿ ಪ್ರೇಮಿಗಳು. ಚಿತ್ರದ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಊರ್ವಶಿ.

ಕೆಂಪು ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುವ ಊರ್ವಶಿ ಆಕ್ರಮಣಕಾರಿ ನೋಟದಲ್ಲಿ ನಡೆದು ಬರುತ್ತಿದ್ದು ಆಕೆಯ ಸುತ್ತಲೂ ಎರಡು ಸಾವಿರದ ನೋಟುಗಳು ಹಾರಾಡುತ್ತಿವೆ. ಪೋಸ್ಟರ್ ನೋಡಿದರೆ ಈ ಸಿನಿಮಾ ಹಣಕ್ಕೆ ಸಂಬಂಧಿಸಿದ್ದು ಎಂಬಂತಿದೆ. ‘ನೀವು ಹಣ ಸಾಲ ಕೊಟ್ಟರೆ ಹಣವನ್ನು ಕಳೆದುಕೊಳ್ಳಬಹುದು ಅಥವಾ ಶತ್ರುಗಳನ್ನು ಗಳಿಸಬಹುದು’ ಎಂಬ ಟ್ಯಾಗ್‌ಲೈನ್ ಮೂಲಕ ಸಿನಿಮಾದ ಕತೆಯ ಬಗ್ಗೆ ಹಿಂಟ್ ನೀಡಿದೆ ಸಿನಿತಂಡ. ಊರ್ವಶಿ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ.

ಮೋಹನ್ ಭಾರಧ್ವಾಜ್ ನಿರ್ದೇಶನದ ಈ ಸಿನಿಮಾಕ್ಕೆ ಶ್ರೀನಿವಾಸ ಚಿಟ್ಟುರಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಮಣಿ ಶರ್ಮಾ ಸಂಗೀತ ನಿರ್ದೇಶನವಿದ್ದು ಜಾನಿ ಮಾಸ್ಟರ್ ನೃತ್ಯ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT