ಶುಕ್ರವಾರ, ಅಕ್ಟೋಬರ್ 30, 2020
19 °C

ಬಾಲಿವುಡ್‌ನಲ್ಲಿ 25 ವರ್ಷ ಪೂರೈಸಿದ ಬಾಬ್ಬಿ ಡಿಯೋಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಬಾಬ್ಬಿ ಡಿಯೋಲ್ ಬಾಲಿವುಡ್‌ನಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಯಾವುದೇ ಏರಿಳಿತಗಳಿಲ್ಲದೇ ಒಂದೇ ಸಮನಾಗಿ ಸಿನಿಮಾರಂಗದಲ್ಲಿ ಸಾಗಿದ್ದ ಬಾಬ್ಬಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.

ಈ ಬಗ್ಗೆ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಬಾಬ್ಬಿ ‘ನನ್ನ ಕಷ್ಟ–ಸುಖ ಎರಡಲ್ಲೂ ಜೊತೆಯಾಗಿದ್ದ ಅಭಿಮಾನಿಗಳಿಗೆ ವಂದನೆಗಳು’ ಎಂದಿದ್ದಾರೆ. 

ಬಾಲಿವುಡ್‌ ನಟ ಧರ್ಮೇಂದ್ರ ಅವರ ಮಗನಾದ ಬಾಬ್ಬಿ, ರಾಜ್‌ಕುಮಾರ್ ಸಂತೋಷಿ ಅವರ ‘ಬರ್‌ಸಾತ್’‌ ಸಿನಿಮಾದ ಮೂಲಕ ಮೊದಲ ಬಾರಿ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. 1995ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಬಾಬ್ಬಿಗೆ ಟ್ವಿಂಕಲ್ ಖನ್ನಾ ಜೋಡಿಯಾಗಿದ್ದರು. 1977ರ ಧರ್ಮ–ವೀರ್ ಸಿನಿಮಾದಲ್ಲಿ ಬಾಲನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಬರ್‌ಸಾತ್ ನಂತರ ಗುಪ್ತ್‌, ಸೋಲ್ಜರ್‌, ಅಜ್‌ನಬೀ ಹಾಗೂ ಹಮ್‌ರಾಝ್‌ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ರೇಸ್‌ 3, ಹೌಸ್‌ಫುಲ್‌ 4 ನಂತಹ ಮಲ್ಟಿಸ್ಟಾರರ್‌ ಸಿನಿಮಾದಲ್ಲೂ ನಟಿಸಿದ್ದಾರೆ ಬಾಬ್ಬಿ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 83 ಹಾಗೂ ಆಶ್ರಮ್ ಸರಣಿಗಳ ಮೂಲಕ ಡಿಜಿಟಲ್‌ ವೇದಿಕೆಗೂ ಕಾಲಿಸಿದ್ದಾರೆ.
ತಮ್ಮ 25 ವರ್ಷಗಳ ಬಾಲಿವುಡ್‌ ಪಯಣದ ಬಗ್ಗೆ ಮಾತನಾಡಿರುವ ಬಾಬ್ಬಿ ‘ಪರಿಪೂರ್ಣವಾಗಿಲ್ಲ, ಆದರೆ ಸುಂದರವಾಗಿತ್ತು’ ಎಂದಿದ್ದಾರೆ.

‘ನಿಮ್ಮ ಆಯ್ಕೆಗಳು ತಪ್ಪಿದ್ದಾಗ ಯಾವುದೂ ಪರಿಪೂರ್ಣ ಎನ್ನಿಸುವುದಿಲ್ಲ. ನಾವು ಆಯ್ಕೆ ಮಾಡುವ ಯಾವುದೇ ಪಾತ್ರವಾಗಲಿ ಅದು ಮೊದಲೇ ಹಿಟ್ ಆಗುತ್ತದೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಾನು ಈಗ ಒಟಿಟಿ ವೇದಿಕೆಯ ಭಾಗವಾಗಿದ್ದೇನೆ. ಅದು ನನಗೆ ತುಂಬಾನೇ ಯಶಸ್ಸು ತಂದುಕೊಟ್ಟಿದೆ. 83 ಹಾಗೂ ಆಶ್ರಮ್‌ ಸರಣಿಯ ನನ್ನ ಕೆಲಸವನ್ನು ನೋಡಿ ಜನ ನನ್ನನ್ನು ಹೊಗಳಿದ್ದಾರೆ. ನನಗೆ ಸದಾ ಬೆಂಬಲವಾಗಿದ್ದ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು