ಸಿನಿಮಾ, ಜಾಹೀರಾತು ಎರಡರಲ್ಲೂ ಬ್ಯುಸಿಯಾಗಿರುವ ಈ ಜೋಡಿ ಪತ್ರಿಕೆಗಳ ಮುಖಪುಟದಲ್ಲೂ ಕಾಯಂ ಜಾಗ ಗಿಟ್ಟಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಈಚೆಗೆ ‘ಗಾರ್ಜಿಯಾ‘ ಪತ್ರಿಕೆ ತನ್ನ ಮುಖಪುಟದಲ್ಲಿ ರಣವೀರ್ ಸಿಂಗ್ ಚಿತ್ರವನ್ನು ಪ್ರಕಟಿಸಿದೆ. ಮಾಸಲು ಬೂದು ಬಣ್ಣದ ಸೂಟುಬೂಟು ಧರಿಸಿ ಟ್ರೆಂಡಿಯಾಗಿ ರಣಬೀರ್ ಫೋಟೊಗೆ ಪೋಸ್ ನೀಡಿದ್ದಾರೆ. ಈ ಫೋಟೊದ ಕೆಳಗೆ ಹೀರೊ ನಂ. 1 ಅನ್ನುವ ಒಕ್ಕಣೆಯೂ ಇದೆ.