ರಣವೀರ್ ಈಗ ‘ಹಬ್ಬಿ ನಂ.1’

ಬುಧವಾರ, ಮಾರ್ಚ್ 20, 2019
25 °C

ರಣವೀರ್ ಈಗ ‘ಹಬ್ಬಿ ನಂ.1’

Published:
Updated:
Prajavani

ಬಾಲಿವುಡ್‌ನ ಮುದ್ದಾದ ಜೋಡಿಯೆಂದೇ ಖ್ಯಾತವಾಗಿರುವ ದೀಪಿಕಾ ಪಡುಕೋಣೆ– ರಣವೀರ್ ಸಿಂಗ್ ಅವರದ್ದು ಮದುವೆಯಾಗಿ ಐದು ತಿಂಗಳಾದರೂ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ.

ಸಿನಿಮಾ, ಜಾಹೀರಾತು ಎರಡರಲ್ಲೂ ಬ್ಯುಸಿಯಾಗಿರುವ ಈ ಜೋಡಿ ಪತ್ರಿಕೆಗಳ ಮುಖಪುಟದಲ್ಲೂ ಕಾಯಂ ಜಾಗ ಗಿಟ್ಟಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಈಚೆಗೆ ‘ಗಾರ್ಜಿಯಾ‘ ಪತ್ರಿಕೆ ತನ್ನ ಮುಖಪುಟದಲ್ಲಿ  ರಣವೀರ್ ಸಿಂಗ್ ಚಿತ್ರವನ್ನು ಪ್ರಕಟಿಸಿದೆ. ಮಾಸಲು ಬೂದು ಬಣ್ಣದ ಸೂಟುಬೂಟು ಧರಿಸಿ ಟ್ರೆಂಡಿಯಾಗಿ ರಣಬೀರ್ ಫೋಟೊಗೆ ಪೋಸ್ ನೀಡಿದ್ದಾರೆ. ಈ ಫೋಟೊದ ಕೆಳಗೆ ಹೀರೊ ನಂ. 1 ಅನ್ನುವ ಒಕ್ಕಣೆಯೂ ಇದೆ.

ಗಂಡನ ಈ ಚಿತ್ರವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೀಪಿಕಾ ಬಲು ಖುಷಿಯಿಂದ ‘ಕ್ಯೂಟಿ ನಂ.1, ಹಾಟಿ ನಂ.1 ಮತ್ತು ಹಸ್ಬೆಂಡ್‌ ನಂ.1’ ಅಂತ ಬರೆದುಕೊಂಡಿದ್ದಾರೆ. ರಣಬೀರ್‌ಗೆ ಹೋಲಿಸಿದರೆ ತುಸು ನಾಚಿಕೆಯ ಸ್ವಭಾವದರಾದ ದೀಪಿಕಾ ಇದೇ ಮೊದಲ ಬಾರಿಗೆ ಗಂಡನ ಬಗ್ಗೆ ಬಹಿರಂಗವಾಗಿ ತಮ್ಮ ಪ್ರೀತಿಯ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.‌ ಪತ್ನಿಯ ಪ್ರೀತಿಗೆ ರಣಬೀರ್ ಮೌನವಾಗಿಯೇ ಮೆಚ್ಚುಗೆ ಸೂಚಿಸಿರುವುದು ಗುಟ್ಟಾಗಿ ಉಳಿದಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !