ಮುಂಬೈ: ಬಾಲಿವುಡ್ ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಕೆಲ ಸಮಯದಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಝೂಮ್ ಟಿವಿ ವರದಿ ಮಾಡಿದೆ. ಅದಾಗ್ಯೂ ಗೋವಿಂದ ಅವರಾಗಲಿ ಅವರ ಪತ್ನಿಯಾಗಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

ಗೋವಿಂದ ಅವರ ಜೀವನಶೈಲಿಯ ಬಗ್ಗೆ ಪತ್ನಿ ಸುನೀತಾ ಅವರು ಬಹಿರಂಗವಾಗಿ ಟೀಕಿಸುತ್ತಿದ್ದು, ಇದೇ ದಂಪತಿ ನಡುವಿನ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಮರಾಠಿ ನಟಿಯೊಬ್ಬರ ಜೊತೆ ಗೋವಿಂದ ಅವರು ವಿವಾಹೇತರ ಸಂಬಂಧವಿಟ್ಟುಕೊಂಡಿರುವುದು ವಿಚ್ಛೇದನಕ್ಕೆ ಕಾರಣ ಎಂದು ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

1987ರ ಮಾರ್ಚ್ನಲ್ಲಿ ಗೋವಿಂದ ಅವರು ಸುನೀತಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಟೀನಾ ಮತ್ತು ಯಶ್ವರ್ಧನ್ ಎಂಬಿಬ್ಬರು ಮಕ್ಕಳಿದ್ದಾರೆ.

ಗೋವಿಂದ ಬಗ್ಗೆ ಸುನೀತಾ ಬೇಸರದ ಮಾತು

ಸಂದರ್ಶನವೊಂದರಲ್ಲಿ ಗೋವಿಂದ ಅವರ ಜೀವನಶೈಲಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸುನೀತಾ ಅವರು, ನಾವಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಾತನಾಡುವುದು ತುಂಬಾ ಕಡಿಮೆ ಎಂದಿದ್ದರು.

‘ನಮಗೆ ಎರಡು ಮನೆಗಳಿವೆ. ಒಂದು ಮನೆಯಲ್ಲಿ ಗೋವಿಂದ ಅವರು ವಾಸಿಸುತ್ತಿದ್ದರೆ, ಇನ್ನೊಂದರಲ್ಲಿ ನಾನು ಮತ್ತು ಮಕ್ಕಳು ಇದ್ದೆವು. ಗೋವಿಂದ ಅವರು ತಡರಾತ್ರಿ ಸ್ನೇಹಿತರೊಂದಿಗೆ ಮನೆಗೆ ಬರುತ್ತಿದ್ದರಿಂದ ನಾವು ಈ ನಿರ್ಧಾರ ಮಾಡಬೇಕಾಯಿತು. ಅವರಿಗೆ ಮಾತನಾಡುವುದು, ಹರಟೆ ಹೊಡೆಯುವುದೆಂದರೆ ಇಷ್ಟ. ನನಗೂ ನನ್ನ ಮಕ್ಕಳಿಗೆ ಅದು ಹಿಡಿಸುತ್ತಿರಲಿಲ್ಲ. ನಾವು ಪರಸ್ಪರ ಮಾತನಾಡುವುದೇ ವಿರಳ’ ಎಂದು ಹೇಳಿದ್ದರು.

‘ಮುಂದಿನ ಜನ್ಮದಲ್ಲಿ ನೀವು ನನ್ನ ಗಂಡನಾಗುವುದು ಬೇಡ ಎಂದು ನಾನು ಅವರಿಗೆ ಹೇಳಿದ್ದೆ. ರಜಾದಿನಗಳಲ್ಲಿ ಅವರು ಹೊರಗೆ ಹೋಗುವುದೇ ಇಲ್ಲ. ನನಗೆ ಹೊರಗೆ ಹೋಗುವುದು, ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವುದೆಂದರೆ ಇಷ್ಟ. ಅವರಿಗೆ ಕೆಲಸ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ನಾವಿಬ್ಬರೂ ಜೊತೆಗೆ ಸಿನಿಮಾಕ್ಕೆ ಹೋದ ಒಂದು ನೆನಪು ಕೂಡ ನನಗಿಲ್ಲ’ ಎಂದು ಸುನೀತಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.