ಬೆಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು.

ಇದೇ ವೇಳೆ ನಟಿ, ಉತ್ತರಪ್ರದೇಶದ ಪಾರಮಾರ್ಥ ನಿಕೇತನ್ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

ಬಳಿಕ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ‘ನಾನು ಇಲ್ಲಿಗೆ ಬಂದಿರುವುದು ನಿಜವಾಗಲೂ ನನ್ನ ಅದೃಷ್ಟ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಇದೇ ವೇಳೆ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ’ ಎಂದರು.

‘ಕುಂಭಮೇಳದ ಅಗಾದವಾದ ಶಕ್ತಿ, ವೈಶಿಷ್ಠ್ಯ, ಸೌಂದರ್ಯವನ್ನು ನಾನು ಕಂಡುಕೊಂಡೆ. ಪೂರ್ಣ ದಿನ ಇಲ್ಲಿಯೇ ಇರಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಕತ್ರಿನಾ ಕೈಫ್ ಪತಿ, ನಟ ವಿಕ್ಕಿ ಕೌಶಲ್ ಅವರು ಕೆಲವು ದಿನಗಳ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿ ತೆರಳಿದ್ದರು.

ಕತ್ರಿನಾ ಚಿತ್ರರಂಗದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕಾರಣ ಅವರ ಬಳಿ ಐದು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಜೀ ಲೇ ಜಾರಾ ಸಿನಿಮಾ ಬಿಟ್ಟರೇ ಯಾವುದೇ ಸಿನಿಮಾಗಳಿಲ್ಲ. ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

2024 ರಲ್ಲಿ ಕತ್ರಿನಾ ವಿಜಯ್ ಸೇತುಪತಿ ಜೊತೆ ನಟಿಸಿದ್ದ ಮೇರಿ ಕ್ರಿಸ್ಮಸ್ ತೆರೆ ಕಂಡಿತ್ತು.
.ಕುಂಭಮೇಳದಲ್ಲಿ ತಮನ್ನಾ ಪುಣ್ಯಸ್ನಾನ: ನಟ ವಶಿಷ್ಠ ಸಾಥ್; ಒಡೆಲಾ–2 ಟೀಸರ್ ಬಿಡುಗಡೆ.ಮಹಾಕುಂಭ ಮೇಳದಲ್ಲಿ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಹಾಡಿ ಹೊಗಳಿದ ನಟ ಅಕ್ಷಯ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.