ಸೋಮವಾರ, ಜುಲೈ 4, 2022
21 °C

ಧೂಮಪಾನ ತೊರೆದ ಬಾಲಿವುಡ್ ತಾರೆಯರಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Salman khan

ಲಾಕ್‌ಡೌನ್‌ ಅವಧಿಯು ಮದ್ಯಪ್ರಿಯರಿಗೆ ಮಾತ್ರ ಸಂಕಷ್ಟ ತಂದಿಟ್ಟಿಲ್ಲ; ಈ ಅವಧಿಯಲ್ಲಿ ಸಿಗರೇಟು ಪ್ರೇಮಿಗಳು ಕೂಡ ಕಷ್ಟ ಅನುಭವಿಸುತ್ತಿದ್ದಾರೆ. ಸಂಪೂರ್ಣ ಲಾಕ್‌ಡೌನ್‌ ಇರುವ ಪ್ರದೇಶಗಳಲ್ಲಿ ಸಿಗರೇಟು ಸಿಗುವುದು ಕಷ್ಟವಾಗಿ, ದಮ್ ಎಳೆಯುವ ಕೆಲಸ ಮೊದಲಿನಷ್ಟು ಸುಲಭದ್ದಾಗಿ ಉಳಿದಿಲ್ಲ.

ಬಾಲಿವುಡ್‌ನ ಕೆಲವು ನಟ– ನಟಿಯರು ಹಿಂದೊಂದು ಸಂದರ್ಭದಲ್ಲಿ ಸಿಗರೇಟು ವ್ಯಸನಿಗಳಾಗಿದ್ದು, ನಂತರ ಅದರಿಂದ ಹೊರಬಂದವರು. ಈ ತಾರೆಯರ ಹೆಸರಿನ ಮೆಲೊಂದು ನೋಟ ಹರಿಸಿ, ತಾವೂ ಸಿಗರೇಟಿನ ಹಿಡಿತದಿಂದ ಹೊರಬರಬಹುದೇ ಎಂದು ಕೆಲವರು ಯತ್ನಿಸಬಹುದು.

ಸಿಗರೇಟು ತೊರೆದವರ ಬಗ್ಗೆ ಆಲೋಚಿಸಿದಾಗ ತಕ್ಷಣ ನೆನಪಾಗುವ ಹೆಸರು ಸಲ್ಮಾನ್ ಖಾನ್ ಅವರದ್ದು. ಒಂದು ಕಾಲದಲ್ಲಿ ಚೈನ್ ಸ್ಮೋಕರ್ ಆಗಿದ್ದ ಸಲ್ಮಾನ್, ನಂತರ ನರ ಸಂಬಂಧಿ ಕಾಯಿಲೆಯೊಂದಕ್ಕೆ ತುತ್ತಾದರು. ಅದರ ನಂತರ ಸಿಗರೇಟು ಸೇದುವ ಅಭ್ಯಾಸ ಬಿಟ್ಟರು ಎನ್ನುತ್ತವೆ ವರದಿಗಳು.

ಕಹೋನಾ ಪ್ಯಾರ್‌ ಹೈ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದ ಹೃತಿಕ್ ರೋಷನ್ ಸಿಗರೇಟು ಬಿಡಲು ಹಲವು ಬಾರಿ ಯತ್ನಿಸಿ ಸೋತಿದ್ದರಂತೆ. ನಂತರ, ಹೇಗಾದರೂ ಮಾಡಿ ಈ ಚಟ ಬಿಡಲೇಬೇಕೆಂದು ತೀರ್ಮಾನಿಸಿ, ಸಿಗರೇಟಿನ ಹಿಡಿತದಿಂದ ತಪ್ಪಿಸಿಕೊಂಡರಂತೆ.

ಸೈಫ್ ಅಲಿ ಖಾನ್ ಅವರನ್ನು ಶಾಶ್ವತ ಧೂಮಪಾನಿ ಎಂದು ಕರೆಯಲಾಗುತ್ತಿತ್ತಂತೆ – ಇವರು ಸಿಗರೇಟು ಬಿಡುವುದೇ ಇಲ್ಲವೇನೋ ಎಂಬಂತೆ! ಆದರೆ ಒಮ್ಮೆ ಹೃದಯಾಘಾತಕ್ಕೆ ತುತ್ತಾದ ನಂತರ ಸೈಫ್ ಸಿಗರೇಟು ಬಿಟ್ಟರು. ಅಷ್ಟೇ ಅಲ್ಲ, ಅವರು ಮದ್ಯಪಾನವನ್ನೂ ತೊರೆದಿದ್ದಾರೆ ಎಂಬ ವರದಿಗಳಿವೆ. ಜೀವಕ್ಕಿಂತ ದೊಡ್ಡದು ಇನ್ನೇನೂ ಇಲ್ಲ ಎನ್ನುತ್ತಾರೆ ಅವರು.


ಸೈಫ್ ಅಲಿ ಖಾನ್

ಮಕ್ಕಳ ಮುದ್ದು ಮುಖ, ‘ಪಪ್ಪಾ ಸಿಗರೇಟು ಬಿಡು’ ಎಂದು ಅವರು ಮಾಡುವ ಮನವಿಗಳಿಗೆ ಬೆಲೆಕೊಟ್ಟು ಸಿಗರೇಟು ಬಿಟ್ಟವರಲ್ಲಿ ಅಮೀರ್ ಖಾನ್ ಅವರೂ ಒಬ್ಬರು. ತಮ್ಮ ಮೊದಲ ಇಬ್ಬರು ಮಕ್ಕಳ ಮಾತುಗಳನ್ನು ಕೇಳಿ ಅಮೀರ್ ಅವರು ಸಿಗರೇಟು ಸೇದುವ ಪ್ರಮಾಣ ಕಡಿಮೆ ಮಾಡಿದ್ದರಂತೆ. 2011ರಲ್ಲಿ ಆಜಾದ್ ಜನಿಸಿದ ನಂತರ ಅಮೀರ್ ಅವರು ಸಿಗರೇಟನ್ನು ಸಂಪೂರ್ಣ ತೊರೆದರಂತೆ.

ಅರ್ಜುನ್ ರಾಮ್‌ಪಾಲ್‌ ಮತ್ತು ಅವರ ಪತ್ನಿ ಸಿಗರೇಟು ತೊರೆದಿದ್ದು ತಮ್ಮ ಮಕ್ಕಳಿಗಾಗಿ ಎನ್ನುತ್ತವೆ ಬಾಲಿವುಡ್ ಅಂಗಳದಿಂದ ಬಂದ ವರದಿಗಳು. 

ವಿವೇಕ್ ಒಬೆರಾಯ್ಒಂ ದು ಕಾಲದಲ್ಲಿ ಧೂಮಪಾನಿ ಆಗಿದ್ದರು. ಒಮ್ಮೆ ಕ್ಯಾನ್ಸರ್‌ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರಂತೆ. ಅಲ್ಲಿನ ರೋಗಿಗಳ ಸ್ಥಿತಿ ಕಂಡು ತಾವು ಸಿಗರೇಟು ಸೇದುವ ಅಭ್ಯಾಸ ಬಿಡಲು ತೀರ್ಮಾನಿಸಿದರಂತೆ. ಅಷ್ಟೇ ಅಲ್ಲ ಅವರು ಧೂಮಪಾನ ವಿರೋಧಿ ರಾಯಭಾರಿ ಕೂಡ.


ಹೃತಿಕ್ ರೋಷನ್ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು