ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Ed Finds A Home ಮಕ್ಕಳ ಚಿತ್ರಕಥೆ ಪುಸ್ತಕ ರಚಿಸಿದ ಬಾಲಿವುಡ್‌ ನಟಿ ಆಲಿಯಾ ಭಟ್‌

Published 16 ಜೂನ್ 2024, 13:57 IST
Last Updated 16 ಜೂನ್ 2024, 13:57 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಆಲಿಯಾ ಭಟ್‌ ಮಕ್ಕಳ ಚಿತ್ರಕಥೆ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕಕ್ಕೆ Ed Finds A Home ಎಂದು ಹೆಸರಿಟ್ಟಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಲಿಯಾ, ಪುಸ್ತಕದ ಮುಖಪುಟವನ್ನು ಬಹಿರಂಗಗೊಳಿಸಿದ್ದಾರೆ. ಲೇಖಕಿಯಾದ ಬಗ್ಗೆ ಬರೆದುಕೊಂಡಿರುವ ಅವರು, ಹೊಸ ಅನ್ವೇಷಣೆ ಆರಂಭವಾಗಿದೆ ಎಂದಿದ್ದಾರೆ. ‘ನಾನು ಚಿಕ್ಕವಯಸ್ಸಿನಲ್ಲಿದ್ದಾಗ ಹೆಚ್ಚು ಕಥೆಗಳನ್ನು ಕೇಳುತ್ತಿದ್ದೆ. ಒಂದು ದಿನ ನನ್ನಲ್ಲಿರುವ ಆ ಮಗುವನ್ನು ಹೊರತಂದು ಮಕ್ಕಳಿಗಾಗಿ ಪುಸ್ತಕವನ್ನು ರಚಿಸುವ ಕನಸು ಕಂಡೆ. ಅದರ ಭಾಗವೇ Ed Finds A Home ಚಿತ್ರಕಥೆ ಪುಸ್ತಕವಾಗಿದೆ’ ಎಂದು ಆಲಿಯಾ ಖುಷಿ ಹಂಚಿಕೊಂಡಿದ್ದಾರೆ. 

‘ಮೊದಲ ಪುಸ್ತಕವನ್ನು Ed-a-Mamma ಮತ್ತು Puffinರ ಸಹಯೋಗದಿಂದ ರಚಿಸಿದ್ದು, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಮುದ್ರಣ ಮಾಡಿದೆ. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ’ ಎಂದಿದ್ದಾರೆ.

ಲೇಖಕಿಯಾದ ಆಲಿಯಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆಲಿಯಾ, ಧರ್ಮ ಪ್ರೊಡಕ್ಷನ್‌ನಲ್ಲಿ ತಯಾರಾಗುತ್ತಿರುವ ‘ಜಿಗ್ರಾ’ ಎನ್ನುವ ಸಿನಿಮಾದ ಸಹ ನಿರ್ಮಾಪಕಿಯಾಗಿದ್ದಾರೆ. ಅಲ್ಲದೆ ರಣಬೀರ್‌ ಕಪೂರ್‌, ವಿಕಿ ಕೌಶಲ್‌ ಜತೆಗೆ ‘ಲವ್‌ & ವಾರ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT