ಶನಿವಾರ, ಜೂನ್ 19, 2021
27 °C

ಬಾಲಿವುಡ್‌ ನಟಿ ಕಂಗನಾ ರಣಾವತ್​ಗೆ ಕೋವಿಡ್‌ ಪಾಸಿಟಿವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಕಂಗನಾ ರಣಾವತ್‌ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಮುಂಬೈನ ತಮ್ಮ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಮುಂದುವರಿಸಿದ್ದಾರೆ. ತಾವು ಶೀಘ್ರ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಕಂಗನಾ ಮಾಹಿತಿ ಹಂಚಿಕೊಂಡಿದ್ದಾರೆ.

‘ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಉರಿ ಕಾಣಿಸಿಕೊಂಡಿತ್ತು. ಸ್ವಲ್ಪ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗಿದೆ. ಹಿಮಾಚಲಕ್ಕೆ ಹೋಗಲು ಬಯಸಿದ್ದೆ. ಅದಕ್ಕೂ ಮುನ್ನ ಕೋವಿಡ್‌ ಪರೀಕ್ಷೆಗೆ ಒಳಗಾದೆ. ಇಂದು ವರದಿ ಪಾಸಿಟಿವ್‌ ಎಂದು ಬಂದಿದೆ. ಹಾಗಾಗಿ ನಾನು ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದೇನೆ. ಈ ವೈರಸ್‌ ನನ್ನ ದೇಹದೊಳಗೆ ಸೇರಿ ಪಾರ್ಟಿ ಮಾಡುತ್ತಿದೆ ಎಂದು ಗೊತ್ತಿರಲಿಲ್ಲ. ಈಗ ನಾನು ಅದನ್ನು ನಾಶ ಮಾಡುತ್ತೇನೆ ಎಂದು ಗೊತ್ತು. ಜನರೇ ಯಾವುದೇ ಶಕ್ತಿ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ನೀವು ಹೆದರಿದರೆ ಅದು (ವೈರಸ್‌) ನಿಮ್ಮನ್ನು ಹೆಚ್ಚು ಹೆದರಿಸುತ್ತದೆ. ಬನ್ನಿ ಈ ಕೋವಿಡ್ -19 ಅನ್ನು ನಾಶಪಡಿಸೋಣ. ಇದು ಅಲ್ಪಕಾಲದ ಜ್ವರ. ಆದರೆ ಹೆಚ್ಚು ಒತ್ತಡ ಹಾಕುತ್ತಿದೆ. ಜನರನ್ನು ಮಾನಸಿಕವಾಗಿ ಆತಂಕಕ್ಕೆ ತಳ್ಳಿದೆ. ಹರ ಹರ ಮಹಾದೇವ್‌ ಎಂದು ಬರೆದುಕೊಂಡಿದ್ದಾರೆ.  

ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಕಂಗನಾ ಅವರ ಟ್ವಿಟರ್‌ ಖಾತೆಯನ್ನು ಇತ್ತೀಚೆಗೆ ಶಾಶ್ವತವಾಗಿ ಅಮಾನತು ಮಾಡಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು