ಗುರುವಾರ , ಮೇ 26, 2022
24 °C

ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕರಿಷ್ಮಾ: ಅಭಿಮಾನಿಗಳಿಂದ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಅವರು ಇಂದು (ಮುಂಜಾನೆ) ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಪ್ಪು ಶರ್ಟ್ ಧರಿಸಿರುವ ಕರಿಷ್ಮಾ, ಮುಂಜಾನೆ ಬಾಲ್ಕನಿಯಲ್ಲಿ ಸೂರ್ಯನಿಂದ ಹೊಮ್ಮುವ ಪ್ರಕಾಶಮಾನ ಕಿರಣಗಳನ್ನು ನೋಡುತ್ತಾ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ.

ಈ ಫೋಟೊವನ್ನು ಸೂರ್ಯ, ಜೇನುಹುಳು ಮತ್ತು ಹೃದಯದ ಎಮೋಜಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ‘ಇದು ಮುದ್ದಾದ ಭಾನುವಾರ’ (That kinda Sunday) ಎಂದು ಬರೆದುಕೊಂಡಿದ್ದಾರೆ.

ಕರಿಷ್ಮಾ ತಮ್ಮ ಉತ್ಸಾಹಭರಿತ ಸೌಂದರ್ಯದಿಂದ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಅವರು, ಪ್ರವಾಸ, ಸಮಾರಂಭ, ಕುಟುಂಬದ ಜೊತೆಗಿನ ಫೋಟೊ ಮತ್ತು ವಿಡಿಯೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಕರಿಷ್ಮಾ, 2018ರಲ್ಲಿ ತೆರೆಕಂಡ ‘ಝಿರೋ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾಗಳಿಂದ ದೂರ ಉಳಿದಿರುವ ಅವರು, ‘ಇಂಡಿಯನ್ ಐಡಲ್’, ‘ಸೂಪರ್ ಡ್ಯಾನ್ಸರ್‌’ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಓದಿ... ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ: ಅಖ್ತರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು