ಶುಕ್ರವಾರ, ಜನವರಿ 27, 2023
20 °C

53ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರು ಶುಕ್ರವಾರ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

90ರ ದಶಕದಲ್ಲಿ ಅಭಿನಯ, ನೃತ್ಯ, ಸೌಂದರ್ಯದಿಂದ ಬಾಲಿವುಡ್‌ ಜಗತ್ತನ್ನೇ ಆಳಿದ ನಟಿ ಮಾಧುರಿ ದೀಕ್ಷಿತ್‌. ‘ಧಕ್‌ಧಕ್’ ಹಾಡಿನಿಂದ ಯುವಕರ ಮನಸಿಗೆ ಲಗ್ಗೆ ಹಾಕಿದ್ದರು.

ಅವರ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಂದ ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

2002ರಲ್ಲಿ ‘ದೇವದಾಸ್‌’ ಚಿತ್ರದಲ್ಲಿ ನಟಿಸಿದ ಬಳಿಕ ಮದುವೆ, ಮಕ್ಕಳು, ಸಂಸಾರ ಎಂದು ಬೆಳ್ಳಿತೆರೆಯಿಂದ ದೂರವೇ ಉಳಿದಿದ್ದ ಮಾಧುರಿ, 2014ರಲ್ಲಿ ‘ಗುಲಾಬ್‌ ಗ್ಯಾಂಗ್‌’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ತೆರೆ ಕಂಡಿದ್ದ ‘ಕಲಂಕ್’, ‘ಟೋಟಲ್‌ ಧಮಾಲ್’' ಚಿತ್ರಗಳಲ್ಲಿ ಅಭಿನಯಿಸಿದ್ದರು. 

ಮಾಧುರಿಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದರೆ ಸೂಪರ್‌ ಸಕ್ಸಸ್‌ ಆಗುತ್ತದೆ ಎನ್ನುವುದನ್ನು ಸಾಬೀತುಪಡಿಸಿದ ನಿರ್ದೇಶಕ ಇಂದ್ರಕುಮಾರ್‌. 1990ರಲ್ಲಿ ಬಂದ ‘ದಿಲ್‌’, 92ರಲ್ಲಿ ಬಂದ ‘ಬೇಟಾ’ ಮತ್ತು 95ರಲ್ಲಿ ಬಂದ ‘ರಾಜಾ’ ಸಿನಿಮಾಗಳಲ್ಲಿ ಮಾಧುರಿಯೇ ಸೂಪರ್‌ಸ್ಟಾರ್‌ ಆಗಿ ಮಿಂಚಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು