ಗುರುವಾರ , ಆಗಸ್ಟ್ 6, 2020
28 °C

ವಿರಾಮದ ಕಾರಣ ಬಿಚ್ಚಿಟ್ಟ ಅನುಷ್ಕಾ ಶರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಸದ್ಯಕ್ಕೆ ಯಾವ ಸಿನಿಮಾಕ್ಕೂ ಸಹಿ ಹಾಕಿಲ್ಲ. ಮುಂದಿನ ಚಿತ್ರದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಸಿನಿಮಾ ಜೀವನದಿಂದ  ಸ್ವಲ್ಪ ಕಾಲ ವಿರಾಮ ಪಡೆದುಕೊಂಡ ಹಾಗಿದೆ.

ಕಳೆದ ವರ್ಷ ಒಂದರ ಹಿಂದೆ ಒಂದರಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರು. ‘ಪಾರಿ’, ‘ಸಂಜು’, ‘ಸೂಯಿ ಧಾಗಾ’, ‘ಝೀರೋ’ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಅವರು ಯಾವುದೇ ಸಿನಿಮಾಕ್ಕೂ ಸಹಿ ಮಾಡಿಲ್ಲ. 

‘ಝೀರೋ’ ನಂತರ ಕೆಲ ತಿಂಗಳು ಸಿನಿಮಾ ನಟನೆಯಿಂದ ಕೊಂಚ ಬ್ರೇಕ್‌ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ. ಮದುವೆ ನಂತರ ಬಿಡುವು ಪಡೆಯದೇ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೆ. ಮದುವೆಯಾದ ಕೆಲ ದಿನದಲ್ಲೇ ‘ಸೂಯಿ ಧಾಗ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡೆ. ನಂತರ ‘ಝೀರೋ’. ಯಾವಾಗ ಸ್ವಲ್ಪ ಸಮಯ ಸಿಗುತ್ತೋ ವಿರಾಟ್‌ನನ್ನು ಭೇಟಿ ಮಾಡುತ್ತಿದ್ದೆ. ಸಿನಿಮಾ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್‌ ಮಾಡುತ್ತಿದ್ದೆ. ಒತ್ತಡ ಎನಿಸುತ್ತಿತ್ತು’ ಎಂದು ಅನುಷ್ಕಾ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. 

ಇತ್ತೀಚೆಗೆ ಈ ನಟಿ ತಮ್ಮ ಪತಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಜೋಡಿ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ಗೆ ಒಟ್ಟಿಗೆ ಹೋಗಿತ್ತು. ಅಲ್ಲಿ ಅಡ್ಡಾಡಿದ, ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು