ಶುಕ್ರವಾರ, ಜೂಲೈ 10, 2020
22 °C

ಹಾಸ್ಯ ಚಿತ್ರಗಳಲ್ಲಿ ಫಾತಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fatima Sana Shaikh

ಬಾಲಿವುಡ್‌ ನಟಿ ಫಾತಿಮಾ ಸನಾ ಶೇಖ್‌ ಈ ಹಾಸ್ಯಪ್ರಧಾನ ಚಿತ್ರಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅವರ ಕೈಯಲ್ಲಿರುವ ‘ಸೂರಜ್‌ ಪೆ ಮಂಡಲ್‌ ಭಾರಿ’ ಹಾಗೂ ‘ಲುಡೊ’ ಎರಡೂ ಚಿತ್ರಗಳು ಹಾಸ್ಯಪ್ರಧಾನ ಚಿತ್ರಗಳು.

‘ದಂಗಲ್’‌ ಹಾಗೂ ‘ಥಗ್ಸ್‌ ಆಫ್‌ ಹಿಂದೂಸ್ತಾನ್’‌ ಚಿತ್ರಗಳ ಮೂಲಕ ಮನೆಮಾತಾದವರು ನಟಿ ಫಾತಿಮಾ ಸನಾ ಶೇಖ್‌. ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೇ ಮೊದಲ ಬಾರಿಗೆ ಹಾಸ್ಯಚಿತ್ರಕ್ಕೆ ಬಣ್ಣ ಹಚ್ಚಿರುವ ಅವರು, ‘ಹಾಸ್ಯ ನಟನೆ ತುಂಬಾ ಕಷ್ಟ’ ಎನ್ನುವುದು ಅವರ ಅನಿಸಿಕೆ.

‘ಪ್ರೇಕ್ಷಕರನ್ನು ನಗಿಸುವುದು ತುಂಬಾ ಕಷ್ಟದ ಕೆಲಸ. ತೆರೆ ಮೇಲಿನ ದೃಶ್ಯವನ್ನು ನೋಡಿ ಅವರು ಹೇಗೆ ನಗುತ್ತಾರೆ ಎಂಬುದನ್ನು ನಮ್ಮ ನಟನೆ ಒಳಗೊಂಡಿರುತ್ತದೆ. ಸಹಜವಾಗಿ ನಟಿಸುವುದು ಮೊದಲು ತುಂಬಾ ಕಷ್ಟವಾಗುತ್ತಿತ್ತು’ ಎಂದಿದ್ದಾರೆ.

‘ಲುಡೊ’ ಚಿತ್ರದಲ್ಲಿ ನಟರಾದ ಆದಿತ್ಯ ರಾಯ್‌ ಕಪೂರ್‌ ಹಾಗೂ ಅಭಿಷೇಕ್‌ ಬಚ್ಚನ್‌ ಜೊತೆ ಫಾತಿಮಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಾನ್ಯಾ ಮಲ್ಹೋತ್ರಾ ಕೂಡ ಇದ್ದಾರೆ. 

‘ಸೂರಜ್‌ ಪೆ ಮಂಡಲ್‌ ಭಾರಿ’ ಚಿತ್ರದಲ್ಲಿ ದಿಲ್ಜಿತ್‌ ದೋಸಾಂಜಾ ಹಾಗೂ ಮನೋಜ್‌ ಬಾಜಪೇಯಿ ಜೊತೆ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳು ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಸೆಟ್ಟೇರುವುದು ವಿಳಂಬವಾಗಿದೆ. 

ಸದ್ಯ ಲಾಕ್‌ಡೌನ್ ಅವಧಿಯನ್ನು ತಮ್ಮ ಮುಂಬೈನಲ್ಲಿನ ಮನೆಯಲ್ಲಿ ಕಳೆಯುತ್ತಿರುವ ಫಾತಿಮಾ, ಬಡವರು ಹಾಗೂ ಅಸಹಾಯಕರಿಗೆ ನೆರವು ನೀಡುತ್ತಿದ್ದಾರೆ. ಮನೆಯಲ್ಲಿಯೇ ಆಹಾರ ತಯಾರಿಸಿ ಪೊಟ್ಟಣ ಮಾಡಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಹಾಗೇ ಸಿನಿಮಾದ ದಿನಗೂಲಿ ಕಾರ್ಮಿಕರಿಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಿಧಿ ಸಂಗ್ರಹಿಸಿ ಹಂಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು