ಬುಧವಾರ, ಏಪ್ರಿಲ್ 21, 2021
25 °C

ಕಾಮಿಡಿಯತ್ತ ಹೊರಳಿದ ಕತ್ರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಅವರ ಚಿತ್ತ ಈಗ ಹಾಸ್ಯಮಯ ಚಿತ್ರಗಳತ್ತ ಹೊರಳಿದೆ. ರೋಹಿತ್‌ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಚಿತ್ರದ ನಂತರ ಅವರು ಎರಡು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಶವಸಂಸ್ಕಾರದ ಸುತ್ತಲಿನ ಪ್ರಸಂಗದ ಕುರಿತ ‘ಡೆಡ್ಲಿ’ ಚಿತ್ರದಲ್ಲಿ ಅವರು ನಟಿಸಲಿದ್ದು, ಇದರಲ್ಲಿ ಅವರ ಪಾತ್ರ ಹಲವು ಶೇಡ್‌ಗಳಲ್ಲಿರಲ್ಲಿದೆಯಂತೆ. ಶವಸಂಸ್ಕಾರ ಎಂದಾಕ್ಷಣ ಯಾವುದೋ ಒಂದು ದುರಂತ ಕಥೆಗೆ ಸೀಮಿತ ಇದು ಎಂದು ಭಾವಿಸುವಂತಿಲ್ಲ, ಏಕೆಂದರೆ ತಂದೆ ಮತ್ತು ಮಗಳ ಗಾಢಸಂಬಂಧವು ಇದರಲ್ಲಿ ತೆರೆದುಕೊಳ್ಳಲಿದೆಯಂತೆ. ಕತ್ರೀನಾ ತಂದೆಯ ಪಾತ್ರವನ್ನು ನಿಭಾಯಿಸಲಿರುವವರು ಬಾಲಿವುಡ್‌ನ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌. ವಿಕಾಸ್‌ ಅವರು ಈಗಾಗಲೇ ಅಮಿತಾಭ್‌ಗೂ ಕಥೆಯನ್ನು ಹೇಳಿದ್ದಾರೆ. ಅಮಿತಾಭ್‌ ಕೂಡ ಕಥೆ ಕೇಳಿ ಪಾತ್ರ ನಿರ್ವಹಿಸಲು ಆಸಕ್ತಿ ತೋರಿದ್ದಾರಂತೆ. ಅವರಿನ್ನೂ ಪಾತ್ರಕ್ಕೆ ಸಹಿ ಹಾಕುವುದು ಬಾಕಿ ಇದೆಯಂತೆ.

ಗಣಿತ ತಜ್ಞ ಆನಂದ್ ಕುಮಾರ್‌ ಬದುಕಿನ ಕಥೆ ಆಧರಿಸಿದ ‘ಸೂಪರ್‌ 30’ ಚಿತ್ರವನ್ನು ನಿರ್ದೇಶಿಸಿದ ವಿಕಾಸ್‌ ಬಾಲ್‌ ಅವರೇ ಕತ್ರೀನಾ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ‘ಸೂಪರ್‌ 30’ ಚಿತ್ರದಲ್ಲಿ ಹೃತಿಕ್‌ ರೋಷನ್‌ ನಟಿಸಿದ್ದು, ಅವರ ಮನೋಜ್ಞ ಅಭಿನಯ ಸಿನಿಪ್ರೇಮಿಗಳ ಮನ ಗೆದ್ದಿತ್ತು.

ಚಿತ್ರದ ಅಧಿಕೃತ ಘೋಷಣೆ ಮೇ ತಿಂಗಳ ಕೊನೆಯ ವೇಳೆಗೆ ಆಗಬಹುದು. ‘ಕೊರೊನಾ’ ಹರಡುವ ಆತಂಕದಲ್ಲಿ ಬಾಲಿವುಡ್‌ ಚಿತ್ರರಂಗದ ಚಟುವಟಿಕೆಗಳು ಸದ್ಯ ಸ್ಥಗಿತಗೊಂಡಿದ್ದು, ಪರಿಸ್ಥಿತಿ ತಹಬದಿಗೆ ಬರುವುದನ್ನು ಚಿತ್ರ ನಿರ್ಮಾಪಕರು ‌ಎದುರು ನೋಡುತ್ತಿದ್ದಾರಂತೆ.

‘ಡೆಡ್ಲಿ’ ಅಲ್ಲದೆ, ಇನ್ನು ಎರಡು ಸಿನಿಮಾಗಳಲ್ಲಿ ಕತ್ರೀನಾ ನಟಿಸುತ್ತಿರುವುದು ಖರೆ. ‘ಫೋನ್‌ ಬೂತ್‌’ ಚಿತ್ರದಲ್ಲೂ ಕತ್ರೀನಾ ನಟಿಸಲಿದ್ದು, ಇವರ ಜತೆಗೆ ಇಶಾನ್‌ ಕತ್ತರ್‌ ಮತ್ತು ಅನನ್ಯ ಪಾಂಡೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಸಲ್ಮಾನ್‌ ಖಾನ್‌ ಜತೆಗೆ ಕತ್ರೀನಾ ಮತ್ತೆ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಟೈಟಲ್‌ ಇನ್ನೂ ಬಹಿರಂಗಗೊಂಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು