ಶನಿವಾರ, ಜೂನ್ 25, 2022
24 °C

ಶಿಲ್ಪಾ ಶೆಟ್ಟಿ ಅಭಿನಯದ 'ನಿಕಮ್ಮಾ' ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅಭಿನಯದ 'ನಿಕಮ್ಮಾ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಟ್ರೇಲರ್‌ ಅನ್ನು ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಬ್ಬೀರ್‌ ಖಾನ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿಲ್ಪಾ ಜೊತೆಗೆ ಅಭಿಮನ್ಯು ದಸ್ಸಾನಿ, ಶಿರ್ಲೆ ಸೇತಿಯಾ, ಸಮೀರ್‌ ಸೋನಿ ನಟಿಸಿದ್ದಾರೆ.

ದಸ್ಸಾನಿ ನಿರುದ್ಯೋಗಿ ಹಾಗೂ ಬೇಜವಾಬ್ದಾರಿ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆತನ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಲು ಶಿಲ್ಪಾ ಶೆಟ್ಟಿ ಕಾರಣರಾಗಲಿದ್ದಾರೆ ಎಂಬುದು ಟ್ರೇಲರ್‌ ನೋಡಿದರೆ ಗೊತ್ತಾಗುತ್ತದೆ.

ಈ ಸಿನಿಮಾದಲ್ಲಿನ ತಮ್ಮ ಪಾತ್ರವನ್ನು ವಿವರಿಸುವ ಟೀಸರ್‌ ವಿಡಿಯೊವೊಂದನ್ನು ಶಿಲ್ಪಾ ಇನ್‌ಸ್ಟಾಗ್ರಾಂನಲ್ಲಿ ಸೋಮವಾರ ಹಂಚಿಕೊಂಡಿದ್ದರು. ಅದರೊಟ್ಟಿಗೆ, ನಾವೀಗ ಹೊಸ ಬ್ರಾಂಡ್ ಅವತಾರದಲ್ಲಿ ಮಾತನಾಡುತ್ತಿದ್ದೇವೆ! ಅಸಲಿ ಅವನಿ ಯಾರು? ಪ್ರೀತಿ ತೋರಿಸಿ. ಮೇ 17ರಂದು ಟ್ರೇಲರ್‌ ಬಿಡುಗಡೆಯಾಗಲಿದೆ ವೀಕ್ಷಿಸಿ ಎಂದೂ ಬರೆದುಕೊಂಡಿದ್ದರು.

ಸೂಪರ್‌ಹೀರೊ ರೀತಿ ಕೆಂಪು, ನೀಲಿ ಬಣ್ಣದ ಉಡುಪು ಧರಿಸಿರುವ ಶಿಲ್ಪಾ, ಕತ್ತಿ ಹಿಡಿದಿರುವುದು ಟೀಸರ್‌ನಲ್ಲಿದೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು, 'ಸಾಮಾಜಿಕ ಮಾಧ್ಯಮ ವೇದಿಕೆಗೆ ಮರಳುತ್ತಿರುವುದಕ್ಕೆ ಸ್ವಾಗತ' ಎಂದು ಪ್ರತಿಕ್ರಿಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು