ಮಂಗಳವಾರ, ಜನವರಿ 18, 2022
22 °C

ಇನ್‌ಸ್ಟಾಗ್ರಾಂ ಪ್ರವೇಶಿಸಿದ ನಿರ್ಮಾಪಕ ಬೋನಿ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ಖ್ಯಾತ ನಿರ್ಮಾಪಕ ಬೋನಿ ಕಪೂರ್‌ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಪ್ರವೇಶ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ದೂರ ಇರುವ ಬೋನಿ ಕಪೂರ್‌ ಅವರ ಇನ್‌ಸ್ಟಾಗ್ರಾಂ ಪ್ರವೇಶವನ್ನು ಬಾಲಿವುಡ್‌ ಮಂದಿ ಸ್ವಾಗತಿಸಿದ್ದಾರೆ. 

ಮಕ್ಕಳಾದ ಜಾಹ್ನವಿ, ಖುಷಿ, ಅರ್ಜುನ್‌ ಹಾಗೂ ಅಂಶುಲಾ ಅವರು ಸ್ವಾಗತ ಕೋರಿದ್ದಾರೆ. ಜಾಹ್ನವಿ ಮತ್ತು ಅರ್ಜುನ್‌ ಪೋಸ್ಟ್‌ ಹಾಕುವ ಮೂಲಕ ಸ್ವಾಗತ ಕೋರಿದ್ದಾರೆ. 

ಬೋನಿ ಕಪೂರ್ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಹಿಂಬಾಲಕರಾಗಿದ್ದಾರೆ. 

ನಿರ್ಮಾಪಕ ಬೋನಿ ಕಪೂರ್‌ ಅವರಿಗೆ ಇಬ್ಬರು ಪತ್ನಿಯರು. ನಟಿ ಶ್ರೀದೇವಿ ಅವರನ್ನು ಬೋನಿ ಕಪೂರ್‌ ಮದುವೆಯಾಗಿದ್ದರು. ಅವರಿಗೆ ಜಾಹ್ನವಿ, ಖುಷಿ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಶ್ರೀದೇವಿ 2018ರಲ್ಲಿ ನಿಧನರಾದರು.

ಬೋನಿ ಕಪೂರ್‌ ಮೊದಲ ಹೆಂಡತಿ ಮೋನಾ ಕಪೂರ್‌. ಇವರಿಗೆ ಅರ್ಜುನ್‌ ಮತ್ತು ಅಂಶುಲಾ ಕಪೂರ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಮೋನಾ 2012ರಲ್ಲಿ ನಿಧನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು