ಅಪ್ಪನ ಸಿನಿಮಾ ಪೋಸ್ಟರ್ ಶೇರ್ ಮಾಡಿದ ಜಾನ್ವಿ

ಶನಿವಾರ, ಮಾರ್ಚ್ 23, 2019
21 °C

ಅಪ್ಪನ ಸಿನಿಮಾ ಪೋಸ್ಟರ್ ಶೇರ್ ಮಾಡಿದ ಜಾನ್ವಿ

Published:
Updated:
Prajavani

ಹೆಣ್ತನದ ಘನತೆಯ ‘ಪಿಂಕ್’ ಸಿನಿಮಾ ಹಿಂದಿಯಲ್ಲಿ ಯಶಸ್ವಿಯಾಗಿತ್ತು. ಬೋನಿ ಕಪೂರ್ ನಿರ್ಮಾಣದಲ್ಲಿ ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ಅಭಿನಯಿಸಿದ್ದ ಈ ಬಾಲಿವುಡ್‌ ಚಿತ್ರ ಇದೀಗ ತಮಿಳಿನಲ್ಲಿ ‘ನೀರ್ಕೊಂಡ ಪಾರ್‌ವೈ’ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. ತಮಿಳು ರಿಮೇಕ್‌ಗೆ ಬೋನಿ ಕಪೂರ್ ಅವರೇ ನಿರ್ಮಾಪಕರಾಗಿದ್ದು, ಈಚೆಗೆ ಸಿನಿಮಾದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.

ಅಪ್ಪನಿಗೆ ಹೆಸರಿನ ಜತೆಗೆ ಲಾಭವನ್ನೂ ತಂದುಕೊಟ್ಟ ‘ಪಿಂಕ್’ ತಮಿಳಿಗೆ ರಿಮೇಕ್ ಅಗುತ್ತಿರುವುದು ಮಗಳು ಜಾನ್ವಿ ಕಪೂರ್‌ಗೆ ತುಂಬಾ ಖುಷಿ ತಂದಿದೆಯಂತೆ. ಈಚೆಗೆ ‘ನೀರ್ಕೊಂಡ ಪಾರ್‌ವೈ’ ಪೋಸ್ಟರ್ ಬಿಡುಗಡೆಯಾಗಿದ್ದು, ಅದನ್ನು ಜಾನ್ವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಬೋನಿಯ ಮೊದಲ ಪತ್ನಿಯ ಮಗ ಅರ್ಜುನ್ ಕಪೂರ್ ಕೂಡಾ ಈ ಚಿತ್ರದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವುದು.

ತಮಿಳು ರಿಮೇಕ್‌ನಲ್ಲಿ ಅಮಿತಾಭ್ ಪಾತ್ರವನ್ನು ಅಜಿತ್ ಮಾಡುತ್ತಿದ್ದು, ಕನ್ನಡತಿ ಶ್ರದ್ಧಾ ಶ್ರೀನಾಥ್, ವಿದ್ಯಾ ಬಾಲನ್, ಅಭಿರಾಮಿ ವೆಂಕಟಾಚಲಂ, ಅಶ್ವಿನ್ ರಾವ್, ಸುಜಿತ್ ಶಂಕರ್ ತಾರಾಗಣದಲ್ಲಿದ್ದಾರೆ.

‘ತಮಿಳು ಸಿನಿಮಾ ನನಗೆ ಯಾವತ್ತೂ ವಿಶೇಷವಾಗಿಯೇ ಕಂಡಿದೆ. ಅಜಿತ್ ಜತೆಗೆ ಈ ಸಿನಿಮಾದ ಸಹಪಯಣ ದೀರ್ಘವಾದದ್ದು. ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾಕ್ಕಾಗಿ ವಿಶೇಷ ಅಂಶವನ್ನು ಸೇರಿಸುವುದಕ್ಕಾಗಿ ನಾವಿಬ್ಬರೂ ಶ್ರಮಪಟ್ಟಿದ್ದೆವು. ಈಗ ‘ಪಿಂಕ್’ ತಮಿಳು ರಿಮೇಕ್ ಮೂಲಕ ನಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಬಲವಾಗಿದೆ’ ಎಂದು ‘ನೀರ್ಕೊಂಡ ಪಾರ್‌ವೈ’ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !