ಶನಿವಾರ, ಡಿಸೆಂಬರ್ 4, 2021
23 °C

ಬಂಟಿ ಔರ್ ಬಬ್ಲಿ 2 ಟೀಸರ್: 12 ವರ್ಷಗಳ ಬಳಿಕ ಸೈಫ್‌- ರಾಣಿ ಜೋಡಿಯ ಮೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಅಭಿನಯದ ಬಂಟಿ ಔರ್ ಬಬ್ಲಿ 2 ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಟೀಸರ್‌ ಅನ್ನು 'ಯಶ್‌ ರಾಜ್‌ ಫಿಲ್ಮ್ಸ್‌ನ' ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

'ಇದು ಬಂಟಿ ಔರ್ ಬಬ್ಲಿ ವರ್ಸಸ್ ಬಂಟಿ ಔರ್ ಬಬ್ಲಿ. ಈಗ ಟೀಸರ್‌ ಹೊರಬಂದಿದೆ. ಅಕ್ಟೋಬರ್‌ 25ಕ್ಕೆ ಟ್ರೇಲರ್‌ ಬಿಡುಗಡೆಯಾಗಲಿದೆ' ಎಂದು ಯಶ್‌ ರಾಜ್‌ ಫಿಲ್ಮ್ಸ್‌ ತಿಳಿಸಿದೆ.

ನವೆಂಬರ್‌ 19 ರಂದು ಚಿತ್ರಮಂದಿರಗಳಲ್ಲಿ 'ಬಂಟಿ ಔರ್‌ ಬಬ್ಲಿ 2' ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನೂ ಯಶ್‌ ರಾಜ್‌ ಸಂಸ್ಥೆ ಹಂಚಿಕೊಂಡಿದೆ.

'ಬಂಟಿ ಔರ್‌ ಬಬ್ಲಿ 2' ಚಿತ್ರದಲ್ಲಿ ಜೊತೆಯಾಗಿ ನಟಿಸುವ ಮೂಲಕ 12 ವರ್ಷಗಳ ನಂತರ ರಾಣಿ ಹಾಗೂ ಸೈಫ್‌ ಒಂದಾಗಿದ್ದಾರೆ.

ಇವರಿಬ್ಬರು 2008ರಲ್ಲಿ ಬಿಡುಗಡೆಯಾಗಿದ್ದ ‘ಥೋಡಾ ಪ್ಯಾರ್‌ ಥೋಡಾ ಮ್ಯಾಜಿಕ್‌’ ಚಿತ್ರದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದರು.

ನವೆಂಬರ್ 19 ರಂದು ಬಂಟಿ ಔರ್‌ ಬಬ್ಲಿ 2 ಬಿಡುಗಡೆಗೆ ಸಿದ್ಧವಾಗಿದೆ. ಸಿದ್ಧಾಂತ್ ಚತುರ್ವೇದಿ ಮತ್ತು ಶಾರ್ವರಿ ವಾಘ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವರುಣ್ ಶರ್ಮಾ ನಿರ್ದೇಶನದ ಮೊದಲ ಚಿತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು