ಬುಧವಾರ, ಜೂನ್ 3, 2020
27 °C

ಕಾನ್‌ ಸಿನಿಮೋತ್ಸವ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್ ಸೋಂಕಿನ ಪರಿಣಾಮ ಕಾನ್ ಅಂತರರಾಷ್ಟ್ರೀಯ ಸಿನಿಮೋತ್ಸವ ಮುಂದೂಡಿಕೆಯಾಗಿದೆ. ಈ ತಿಂಗಳಿನಲ್ಲಿಯೇ ಚಿತ್ರೋತ್ಸವ ನಿಗದಿಯಾಗಿತ್ತು. ಆದರೆ, ಕೊರೊನಾ ಭೀತಿಯಿಂದಾಗಿ ಈ ವರ್ಷ ಚಿತ್ರೋತ್ಸವ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಫ್ರಾನ್ಸ್‌ ಸರ್ಕಾರ ಸಮುದಾಯ ಭಾಗವಹಿಸುವಿಕೆಯ ಕಾರ್ಯಕ್ರಮಗಳಿಗೆ ನಿಷೇಧ ಹೇರಿದೆ. ಹಾಗಾಗಿ, ಚಿತ್ರೋತ್ಸವವನ್ನು ಜೂನ್ ಅಂತ್ಯದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ನಡೆಸಲು ಸಿನಿಮೋತ್ಸವ ಮಂಡಳಿ ನಿರ್ಧರಿಸಿದೆ.

‘ಜಾಗತಿಕ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ 19ಕ್ಕೆ ಬಲಿಯಾದವರಿಗೆ ಸಂತಾಪ ಸಲ್ಲಿಸುತ್ತೇವೆ. ಈ ಮಾರಕ ಸೋಂಕಿನ ವಿರುದ್ಧ ಹೋರಾಡುತ್ತಿರುವವರ ಜತೆಗೆ ನಾವಿದ್ದೇವೆ’ ಎಂದು ಮಂಡಳಿ ಸಂದೇಶ ನೀಡಿದೆ.

ಪ್ರಸ್ತುತ ಫ್ರಾನ್ಸ್‌ನಲ್ಲಿ ಕೊರೊನಾ ಆತಂಕ ಸೃಷ್ಟಿಸಿದೆ. ಅಂತರರಾಷ್ಟ್ರೀಯ ಆರೋಗ್ಯದ ಪರಿಸ್ಥಿತಿಯು ಗಂಭೀರವಾಗುತ್ತಿದೆ. ಇಂತಹ ಸಂಕಷ್ಟದಲ್ಲಿ ಸಿನಿಮೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸಿನಿಮೋತ್ಸವ ನಡೆಸಲು ಸಾಧ್ಯವಾಗದಿದ್ದರೆ ನೆಟ್‌ಫ್ಲಿಕ್ಸ್‌ ಸೇರಿದಂತೆ ಇತರೆ ತಾಣಗಳಲ್ಲಿ ಕಾನ್‌ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ ಸಿನಿಮಾಗಳನ್ನು ಬಿಡುಗಡೆ ಮಾಡುವ ಆಲೋಚನೆಯೂ ಇದೆ ಎಂದು ಮಂಡಳಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು