ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು ಅಪಘಾತ: ಸುರಕ್ಷಿತವಾಗಿದ್ದೇನೆ ಎಂದ ತೆಲುಗು ನಟ ಶರ್ವಾನಂದ್

Published 29 ಮೇ 2023, 7:49 IST
Last Updated 29 ಮೇ 2023, 7:49 IST
ಅಕ್ಷರ ಗಾತ್ರ

ಮುಂಬೈ: ತೆಲುಗು ನಟ ಶರ್ವಾನಂದ್ ಅವರ ಕಾರು ಭಾನುವಾರ ಅಪಘಾತಕ್ಕೀಡಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು. ಸುರಕ್ಷಿತರಾಗಿದ್ದೇನೆ ಎಂದು ನಟ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ನಟ ಶರ್ವಾನಂದ್ ‘ ಭಾನುವಾರ ಬೆಳಿಗ್ಗೆ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಹೆಚ್ಚು ಹರಿದಾಡಿದೆ. ಆದರೆ ಇದು ತುಂಬಾ ಚಿಕ್ಕ ಅಪಘಾತ. ಚಿಂತಿಸುವ ಅಗತ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.

‘ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ. ಮನೆಯಲ್ಲಿಯೇ ಇದ್ದೇನೆ. ನಿಮ್ಮ ಕಾಳಜಿಗಾಗಿ ಎಲ್ಲರಿಗೂ ಧನ್ಯವಾದಗಳು‘ ಎಂದು ನಟ ಶರ್ವಾನಂದ್ ತಿಳಿಸಿದ್ದಾರೆ.

2004 ರಲ್ಲಿ 'ಐದೋ ತಾರೀಕು' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ 'ಒಕೆ ಒಕಾ ಜೀವಿತಂ' ಚಿತ್ರದಲ್ಲಿ ನಟ ಶರ್ವಾನಂದ್ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT