ಗುರುವಾರ , ಜನವರಿ 28, 2021
15 °C

ಅನಾಥಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ‘ಕೇರ್ ಆಫ್ ಫುಟ್‌ಪಾತ್’ ಖ್ಯಾತಿಯ ಕಿಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಸ್ಟರ್ ಕಿಶನ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಕಿಶನ್ ಎಸ್.ಎಸ್. ತಮ್ಮ ಜನ್ಮದಿನ ಆಚರಣೆಯನ್ನು ಬೀದಿ ಮಕ್ಕಳು ಮತ್ತು ಅನಾಥಾಶ್ರಮ ಮಕ್ಕಳೊಂದಿಗೆ ಆಚರಿಸಿಕೊಂಡರು. ಈ ಪದ್ಧತಿಯನ್ನು ಅವರು ತಮ್ಮ ಮೊದಲ ಚೊಚ್ಚಲ ನಿರ್ದೇಶನದ ಚಿತ್ರ ‘ಕೇರ್ ಆಫ್ ಫುಟ್‌ಪಾತ್’ ಅನ್ನು ಪ್ರಾರಂಭಿಸಿದ ವರ್ಷದಿಂದ ಆಚರಿಸಿಕೊಂಡು ಬಂದಿದ್ದಾರೆ. ಆ ಚಿತ್ರ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿತ್ತು.

ಜನವರಿ 6, 2021 ಅವರ 25ನೇ ವರ್ಷದ ಹುಟ್ಟುಹಬ್ಬ. ಅಂದು ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾದ ಡಾ. ಫಾದರ್ ಆ್ಯಂಟನಿ ಸೆಬಾಸ್ಟಿಯನ್ ಕಿಶನ್ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕಿಶನ್ ಬಗ್ಗೆ ಮಾತಾಡಿದ ಅವರು ಕಳೆದ ಹದಿನೈದು ವರ್ಷಗಳಿಂದ ಬೀದಿಮಕ್ಕಳು ಹಾಗು ಬಡಮಕ್ಕಳಿಗಾಗಿ ಮಾಡಿರುವ ಶ್ಲಾಘನೀಯ ಕೆಲಸವನ್ನು ಸ್ಮರಿಸಿದರು.

ಕಿಶನ್ ಈ ಕೆಲಸವನ್ನು ಭಾರತದಲ್ಲಿ ಮಾತ್ರವಲ್ಲದೆ, ಚಿಕಾಗೋ ವಿಶ್ವವಿದ್ಯಾಲಯ ಹಾಗು ಆ್ಯಮ್‌ಸ್ಟರ್‌ಡ್ಯಾಂನ ಹಲವಾರು ಎನ್‌ಜಿೊಗಳು ಗುರುತಿಸಿದ್ದನ್ನೂ ಅವರು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಕಿಶನ್‌ ‘ನಾನು 2021ರಲ್ಲಿ ನನ್ನ ಹೊಸ ಚಿತ್ರ ಘೋಷಣೆ ಮಾಡುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು