‘ಕೌನ್‌ ಬನೇಗಾ ಕರೋಡ್‌ಪತಿ’ ಪ್ರಶ್ನೆ ಮೇ ಒಂದರಿಂದ: ಅಮಿತಾಭ್‌ ಬಚ್ಚನ್‌

ಬುಧವಾರ, ಏಪ್ರಿಲ್ 24, 2019
23 °C

‘ಕೌನ್‌ ಬನೇಗಾ ಕರೋಡ್‌ಪತಿ’ ಪ್ರಶ್ನೆ ಮೇ ಒಂದರಿಂದ: ಅಮಿತಾಭ್‌ ಬಚ್ಚನ್‌

Published:
Updated:
Prajavani

ಮುಂಬೈ: ದೇಶದ ಮನೆಮಾತಾಗಿರುವ ರಿಯಾಲಿಟಿ ಶೋ, ಹಿಂದಿಯ ‘ಕೌನ್‌ ಬನೇಗಾ ಕರೋಡ್‌ಪತಿ‘ಗೆ ಪ್ರವೇಶ ಪ್ರಕ್ರಿಯೆ ಮೇ ಒಂದರಿಂದ ಆರಂಭವಾಗಲಿದೆ ಎಂದು, ಶೋ ನಿರೂಪಕ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಪ್ರಕಟಿಸಿದ್ದಾರೆ.

ಸೋನಿ ಟಿ.ವಿ ಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋದಲ್ಲಿ ಎಲ್ಲಾ ಹಂತದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಕೋಟಿ ಗೆಲ್ಲುವ ಸರದಾರ ಯಾರಾಗುತ್ತಾರೆ ಎಂಬ ಕುತೂಹಲ ಈಗಾಗಲೇ ಆರಂಭವಾಗುತ್ತದೆ. ಈ ಬಾರಿ Sony LIV ಆ್ಯಪ್‌ಗೆ ಲಾಗ್ ಆನ್‌ ಆಗುವ ಮೂಲಕ ಪ್ರಶ್ನೆಗೆ ಉತ್ತರಿಸಿ ಪ್ರವೇಶ ಪಡೆಯಬಹುದಾಗಿದೆ.

ಈ ಬಗ್ಗೆ 40 ಸೆಕೆಂಡುಗಳ ವಿಡಿಯೊ ಮೂಲಕ ಸೋನಿ ಟಿ.ವಿ ಪ್ರಚಾರ ನೀಡುತ್ತಿದೆ. ಈ ವಿಡಿಯೊವನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಅದು ಹಂಚಿಕೊಂಡಿದೆ. ವಿಡಿಯೊದಲ್ಲಿ ಗೃಹಿಣಿಯೊಬ್ಬರು ವೀಕ್ಷಕರಿಗೆ ಮಾಹಿತಿ ನೀಡುತ್ತಾರೆ. ಆರಂಭಿಕ ಪ್ರಶ್ನೆಗಳಿಗೆ ಉತ್ತರಿಸಿ ಗೆಲ್ಲುವ ವೀಕ್ಷಕರಿಗೆ ಮುಂದಿನ ಹಂತದ ಆಡಿಷನ್‌ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !