ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆಲ್ಲೋ ಶೋ’ ಚಿತ್ರದ ಬಾಲನಟ ನಿಧನ

Last Updated 12 ಅಕ್ಟೋಬರ್ 2022, 15:20 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿರುವ ‘ಚೆಲ್ಲೋ ಶೋ’ ಚಿತ್ರದಲ್ಲಿ ಅಭಿನಯಿಸಿದ್ದ 10 ವರ್ಷದ ಬಾಲಕ ರಾಹುಲ್‌ ಕೋಲಿ ಲುಕೇಮಿಯಾದಿಂದ (ರಕ್ತ ಕ್ಯಾನ್ಸರ್‌) ಮೃತಪಟ್ಟಿದ್ದಾನೆ. ಇದೇ 14ರಂದು ಚಿತ್ರವು ಬಿಡುಗಡೆಯಾಗಲಿದೆ.

‘ಅಕ್ಟೋಬರ್‌ 2ರಂದು ರಾಹುಲ್‌ ಬೆಳಿಗ್ಗೆ ತಿಂಡಿ ತಿಂದಿದ್ದ. ಪದೇ ಪದೇ ಜ್ವರ ಬರುತ್ತಲೇ ಇತ್ತು. ಸ್ಪಲ್ಪ ಹೊತ್ತಿಲ್ಲನೇ ಮೂರು ಬಾರಿ ರಕ್ತದ ವಾಂತಿ ಮಾಡಿಕೊಂಡು. ನಂತರ ಆತ ನಮ್ಮೆಲ್ಲಾ ಬಿಟ್ಟು ಹೊರಟು ಹೋದ’ ಎಂದು ಬಾಲಕನ ತಂದೆ ಆಟೋರಿಕ್ಷಾ ಚಾಲಕ ರಾಮು ಕೋಲಿ ದುಃಖಿಸಿದರು.

‘ಸಿನಿಮಾದಲ್ಲಿ ಅಭಿನಯಿಸಿ ಆತನಿಗೆ ಬಹಳ ಖುಷಿಯಾಗಿತ್ತು. ನೋಡು ಅಪ್ಪಾ, ಅಕ್ಟೋಬರ್‌ 14ರ ನಂತರ ನಮ್ಮ ಜೀವನವೇ ಬದಲಾಗಲಿದೆ ಎಂದು ರಾಹುಲ್‌ ಹೇಳುತ್ತಿದ್ದ’ ಎಂದು ರಾಮು ಅವರು ನೆನಪಿಸಿಕೊಂಡರು. ‘ಅಕ್ಟೋಬರ್‌ 14ರಂದು ನಾವು ಕುಟುಂಬದವರೆಲ್ಲಾ ರಾಹುಲ್‌ ಅಭಿನಯವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತೇವೆ’ ಎಂದು ರಾಮು ಅವರು ಹೇಳಿದರು.

ಚಿತ್ರದ ನಿರ್ದೇಶಕ ನಳಿನ್‌ ಪಾಂಡ್ಯ ಪ್ರತಿಕ್ರಿಯಿಸಿ, ‘ಇಡೀ ಚಿತ್ರತಂಡ ಕೊನೆಯ ಕ್ಷಣದಲ್ಲಿ ರಾಹುಲ್‌ನ ಜತೆಗಿತ್ತು. ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT