‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಆಡಿಯೊ ಬಿಡುಗಡೆ

7

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಆಡಿಯೊ ಬಿಡುಗಡೆ

Published:
Updated:
Prajavani

‘ಊರ್ವಶಿ...’ ಹಾಡಿನ ಮೂಲಕ ಭಾರಿ ಕುತೂಹಲ ಮೂಡಿಸಿರುವ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.

‘ಗ್ರಾಮೀಣ ಪ್ರದೇಶದ ಬಡ ಕುಟುಂಬವೊಂದರ ಸುಖ–ದುಃಖಗಳ ಚಿತ್ರಣ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಪ್ರತ್ಯೇಕ ಕಾಮಿಡಿ ಟ್ರ್ಯಾಕ್‌ ಇಲ್ಲ. ಇಡೀ ಚಿತ್ರ ಕಾಮಿಡಿ ಸಂಭಾಷಣೆಗಳಿಂದ ತುಂಬಿದೆ ಮತ್ತು ಎಲ್ಲವೂ ಸಹಜವಾಗಿಯೇ ಬಂದಿವೆ’ ಎಂದು ಮುಖ್ಯ ಭೂಮಿಕೆಯಲ್ಲಿರುವ ತಬಲ ನಾಣಿ ಹೇಳಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಕತೆ ಇದು’ ಎನ್ನುತ್ತಾರೆ ನಿರ್ಮಾಪಕ ಮಂಜುನಾಥ್‌.

‘ಜೀವನದಲ್ಲಿ ಎದುರಾಗುವ ಹಲವು ಸಂಕಷ್ಟಗಳನ್ನು ಹಾಸ್ಯದ ಮೂಲಕ ತಿಳಿಸುತ್ತಾ ಒಂದು ಮಂದ್ರ ಸ್ಥಿತಿಗೆ ತಂದು ನಿಲ್ಲಿಸುವ ನಿರೂಪಣೆ ಇದರಲ್ಲಿದೆ’ ಎಂದು ನಾಯಕ ನಟ ಚಂದನ್‌ ಆಚಾರ್‌ ಹೇಳುತ್ತಾರೆ. ನಟಿ ಸಂಜನಾ ಆನಂದ್‌ ಈ ಚಿತ್ರದ ನಾಯಕಿ. ಚಿತ್ರವನ್ನು ಕುಮಾರ್‌ ನಿರ್ದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !