ಕೆಮಿಸ್ಟ್ರಿ ಆಫ್ ಕರಿಯಪ್ಪ : ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು...

7

ಕೆಮಿಸ್ಟ್ರಿ ಆಫ್ ಕರಿಯಪ್ಪ : ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು...

Published:
Updated:

ಬೆಂಗಳೂರು:  ಎಂ. ಸಿರಿ ಪ್ರೊಡಕ್ಷನ್ಸ್‌ನಡಿ ಡಾ.ಮಂಜುನಾಥ್ ಡಿ.ಎಸ್. ನಿರ್ಮಾಣದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಈ ಚಿತ್ರದ ‘ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು... ಶ್ರೀಮತಿ ಆಗು ಅಂದ್ರೆ ಮೂತಿ ತಿರುವಿ ಹೋದ್ಲು’ ಎಂಬ ಮೊದಲ ಹಾಡು ಕೂಡ ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಆರವ್ ರಿಶಿಕ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನವೀನ್ ಸಜ್ಜು ಕಂಠದಾನ ಮಾಡಿದ್ದಾರೆ. ಈ ಹಾಡಿಗೆ ಚಿತ್ರದ ನಿರ್ದೇಶಕ ಕುಮಾರ್ ಅವರೇ ಸಾಹಿತ್ಯ ರಚಿಸಿದ್ದಾರೆ. ಆನಂದ್ ಆಡಿಯೊ ಸಂಸ್ಥೆ ಚಿತ್ರದ ಲಿರಿಕಲ್ ಆಡಿಯೊ ಬಿಡುಗಡೆ ಮಾಡಿದೆ. ಲವ್ ಪ್ಯಾಥೋ ಸಾಂಗ್ ಇದಾಗಿದ್ದು, ಟಪ್ಪಾಂಗುಚ್ಚಿ ಶೈಲಿಯಲ್ಲಿದೆ. 

‘ಕಿರಿಕ್ ಪಾರ್ಟಿ’ ಖ್ಯಾತಿಯ ಚಂದನ್ ಆಚಾರ್, ಯುವ ನಾಯಕಿ ಸಂಜನಾ ಆನಂದ್, ತಬಲ ನಾಣಿ, ಸುಚೇಂದ್ರಪ್ರಸಾದ್, ಮಂಜುನಾಥ್ ಡಿ.ಎಸ್., ಮೈಕೋ ನಾಗರಾಜ್, ರಾಕ್‌ಲೈನ್ ಸುಧಾಕರ್ ತಾರಾಗಣದಲ್ಲಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. 

ಸಜಯ್ ಕುಮಾರ್ ಅವರ ಹಿನ್ನೆಲೆ ಸಂಗೀತವಿದೆ. ಛಾಯಾಗ್ರಹಣ ಶಿವಸೇನಾ ಅವರದ್ದು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !