ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೊಟ್ಟಿಗೆ ನೀವು ನೋಡಿ ಇಂತಹ ಸಿನಿಮಾ!

ಸಕ್ಕರೆ ಕಡ್ಡಿ
Last Updated 13 ನವೆಂಬರ್ 2018, 20:30 IST
ಅಕ್ಷರ ಗಾತ್ರ

ರುಡಿ

ಡಿಸಲೆಕ್ಸಿಯಾ (dyslexia) ಅಂದರೆ ಅಕ್ಷರಗಳು ಅಥವಾ ಪದಗಳ ವಿವರ, ಉಚ್ಛಾರಣೆ, ವಿಶ್ಲೇಷಣೆ ಬಗ್ಗೆ ಕಲಿಯುವಾಗ ತೀವ್ರ ತೊಂದರೆ ಎದುರಿಸುವುದು. ಆದರೆ ಸಾಮಾನ್ಯ ಜ್ಷಾನಕ್ಕೆ ಇದಾವ ಅಡ್ಡಿಯಾಗಿರುವುದಿಲ್ಲ. ಅಂಥ ತೊಂದರೆ ಹೊಂದಿದ ರುಡಿ ರೆಟಿಗರ್‌ ಯುನಿವರ್ಸಿಟಿಗೆ ಫುಟ್‌ಬಾಲ್‌ ಆಡುವ ಕನಸು ಕಂಡಿರುತ್ತಾನೆ. ಅವನಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇಲ್ಲವೆಂದೇ ಎಲ್ಲರ ಭಾವನೆ. ಆದರೆ ಅದೆಲ್ಲ ತೊಂದರೆಯನ್ನು ಮೀರಿ ನಿಂತು ಆತ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ. ಇದೊಂದು ನೈಜ ಕಥೆಯನ್ನಾಧರಿಸಿದ ಚಿತ್ರ

ಎಡ್ಯುಕೇಟಿಂಗ್ ರಿಟಾ (1983) British drama/comedy film directed by Lewis Gilbert.

ರೀಟಾ ಎಂಬ ಅಸಂತುಷ್ಟ ಹುಡುಗಿಯೊಬ್ಬಳ ಕಥನವಿದು. ಸಾಧಾರಣ ಕಾರ್ಮಿಕ ವರ್ಗದಲ್ಲಿ ಬೆಳೆದ ಹುಡುಗಿ. ತನ್ನ ಗಂಡನೊಂದಿಗೆ ವಾಸಿಸುತ್ತಿರುತ್ತಾಳೆ. ಗಂಡ ಈಕೆಯ ಶಿಕ್ಷಣದ ಆಸಕ್ತಿಯನ್ನು ಹೊಸಕಿ ಹಾಕಲು ನೋಡುವವನು. ಆದರೆ ಆಕೆಗೆ ತನ್ನ ಮುಂದಿನ ಭವಿಷ್ಯವನ್ನು ರೂಪಿಸುವ ಮತ್ತು ಸುಖೀ ಬದುಕನ್ನು ಕೊಡುವ ಸಾಮರ್ಥ್ಯ ಶಿಕ್ಷಣಕ್ಕೆ ಮಾತ್ರ ಸಾಧ್ಯ ಎನ್ನುವ ಅಚಲ ವಿಶ್ವಾಸ. ಅಂಥ ಆತ್ಮವಿಶ್ವಾಸದ ಜ್ಞಾನಾರ್ಜನೆಯ ಹಸಿವು ಹೇಳುವ ಚಿತ್ರವಿದು.

ದ ಪರ್ಸುಯೇಟ್ ಆಫ್ ಹ್ಯಾಪಿನೆಸ್ (2006) directed by Gabriele Muccino

ತನ್ನ ಮಗನ ಶಿಕ್ಷಣ ಮತ್ತು ಹೆಂಡತಿಗೆ ಸೂಕ್ತ ವ್ಯವಸ್ಥೆ ಮಾಡುವುದಕ್ಕೂ ಹೆಣಗುವ ಒಬ್ಬ ಸಾಧಾರಣ ಸೇಲ್ಸ್‌ಮ್ಯಾನ್‌ ತನ್ನ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಎಲ್ಲ ಕಷ್ಟಗಳನ್ನು ಎದುರಿಸಿ ಒಂದು ಬೃಹತ್‌ ಕಮಿಷನ್‌ ಏಜನ್ಸಿ ಕಂಪನಿಯ ಮಾಲೀಕನಾಗುವ ಯಶೋಗಾಥೆಯಿದು.

ದಿ ಬ್ಲೈಂಡ್‌ ಸೈಡ್‌ (2009)American biographical sportsdrama film written & directed by John Lee Hancock: ಅಮೆರಿಕ ಫುಟ್‌ಬಾಲ್‌ ಆಟಗಾರ ಮೈಕಲ್‌ ಒಹರ್‌ ಜೀವನವನ್ನಾಧರಿಸಿದ ಚಿತ್ರ. ಓರ್ವ ದಂಪತಿ ಈತನನ್ನು ದತ್ತು ತೆಗೆದುಕೊಂಡಿರುತ್ತದೆ.

ಆ ದಂಪತಿ ಒಹರ್‌ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸಿ ಬೆಳೆಸುತ್ತದೆ. ಮುಂದೊಂದು ದಿನ ಆತ ಹೆಸರಾಂತ ಫುಟ್‌ಬಾಲ್‌ ಆಟಗಾರನಾಗಿ ಹೊರಹೊಮ್ಮುವ ಅತ್ಯಂತ ಸ್ಪೂರ್ತಿ ತುಂಬುವ ಕಥನವಿದು.

ಸ್ಟ್ಯಾಂಡ್‌ ಅಂಡ್‌ ಡೆಲಿವರ್‌ Directed by Ramón Menéndez: ಒಬ್ಬ ಗಣಿತ ಶಿಕ್ಷಕನ ಜೀವನ ಆಧರಿಸಿದ ಚಿತ್ರವಿದು. ಭರವಸೆಗಳನ್ನೇ ಕಳಕೊಂಡಂತಿರುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವ ಮ್ಯಾಥೆಮೆಟಿಕ್ಸ್‌ ಟೀಚರ್‌ ಒಬ್ಬ , ಅತ್ಯಂತ ವಿನೂತನ, ಅಸಾಂಪ್ರದಾಯಿಕ ವಿಧಾನಗಳ ಮೂಲಕ ಅಂಥ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಯತ್ನ ಮಾಡುತ್ತಾನೆ. ತುಂಬ ಸ್ಫೂರ್ತಿದಾಯಕ ಚಿತ್ರ.

ಥಿಯರಿ ಆಫ್‌ ಎವರಿಥಿಂಗ್‌ (2014): ನಿರ್ದೇಶನ: ಜೇಮ್ಸ್‌ ಮಾರ್ಶ್ಹೆ ಸರಾಂತ ವಿಶ್ವವಿಜ್ಞಾನ ಮತ್ತು ಖಗೊಳವಿಜ್ಞಾನದಲ್ಲಿ ಅಪ್ರತಿಮ ಸಾಧನೆ ಮಾಡಿದ ಸ್ಟೀಫನ್‌ ಹಾಕಿಂಗ್‌ ಕುರಿತ ಚಿತ್ರವಿದು. ಖಗೋಳ ವಿಜ್ಞಾನದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸ್ಟಿಫನ್ಸ್‌ ಮೊಟರ್‌ ನ್ಯುರಾನ್‌ ರೋಗದಿಂದ ಬಳಲುತ್ತಿದ್ದ. ಈತನ ರೋಗದ ಬಗ್ಗೆ ಅಂತಿಮ ಷರಾ ಬರೆದ ವೈದ್ಯ ಹೆಚ್ಚೆಂದರೆ ಎರಡು ವರ್ಷ ಬದುಕುಳಿಯಬಹುದು ಎಂದಿದ್ದರು. ಆದರೆ ಛಲ ಬಿಡದ ಈ ವ್ಯಕ್ತಿ ಎದ್ದು ನಡೆಯಲೂ ಆಗದೆ. ಅತ್ತ ಇತ್ತ ಹೊರಳಲೂ ಆಗದೆ ಒಂದು ವಿಶೇಷ ಕುರ್ಚಿಯಲ್ಲೇ ಕುಳಿತು ಇಡೀ ವಿಶ್ವ ವಿಹ್ಞಾನ ಲೋಕಕ್ಕೆ ಮಹತ್ತರವಾದ ವೈಜ್ಞಾನಿಕ ಚಿಂತನೆಗಳನ್ನು ನೀಡಿ 76 ವರ್ಷಗಳ ಕಾಲ ಬಾಳಿ ಬದುಕಿದ. ಸಾಧನೆಯ ಕನಸಿಗೆ ಯಾವ ನ್ಯೂನತೆಗಳೂ ಅಡ್ಡಿ ಬಾರವು ಎನ್ನುವುದನ್ನು ಅಕ್ಷರಶಃ ನಿರೂಪಿಸುವ ಸತ್ಯ ಕಥನವಿದು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT