ಶನಿವಾರ, ನವೆಂಬರ್ 23, 2019
18 °C

ಚಿರಂಜೀವಿಗೆ ‘ಲೂಸಿಫರ್‌’ ಹಕ್ಕು

Published:
Updated:
Prajavani

ಮಲಯಾಳಂನ ಯಶಸ್ವಿ ಸಿನಿಮಾ ‘ಲೂಸಿಫರ್‌’ ಹಕ್ಕನ್ನು ನಟ ಚಿರಂಜೀವಿ ಕೊಂಡುಕೊಂಡಿದ್ದಾರೆ.

ಮಲಯಾಳಂ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಈ ಕುರಿತು ಘೋಷಿಸಿದ್ದಾರೆ. ನಟ ಮೋಹನ್‌ಲಾಲ್ ಅವರ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಪೃಥ್ವಿರಾಜ್‌ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಬಾಲಿವುಡ್‌ ನಟ ವಿವೇಕ್‌ ಒಬೇರಾಯ್‌ ಕೂಡ ಅಭಿನಯಿಸಿದ್ದಾರೆ.

‘ಸೈರಾ ನರಸಿಂಹರೆಡ್ಡಿ ಸಿನಿಮಾದ ಪ್ರಮೋಷನ್‌ ವೇಳೆ ಚಿರಂಜೀವಿ ಅವರು ‘ಲೂಸಿಫರ್‌’ ಸಿನಿಮಾ ಬಗ್ಗೆ ಮಾತನಾಡಿದರು. ಬಳಿಕ ಅವರು ಈ ಚಿತ್ರದ ಹಕ್ಕು ಕೊಂಡುಕೊಳ್ಳುವುದಾಗಿ ಹೇಳಿದ್ದರು’ ಎಂದು ಪೃಥ್ವಿರಾಜ್‌ ಹೇಳಿದ್ದಾರೆ.

ಸತತವಾಗಿ ಮೂರು ಸಿನಿಮಾಗಳು ಹಿಟ್ ಆದ ಕಾರಣ ಸುಕುಮಾರ್‌ ಈಗ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅವರ 20ನೇ ಚಿತ್ರವನ್ನು ಅವರು ನಿರ್ದೇಶಿಸಲಿದ್ದಾರೆ.

ಪ್ರತಿಕ್ರಿಯಿಸಿ (+)