ಶುಕ್ರವಾರ, ಮೇ 20, 2022
26 °C

ಇನ್‌ಸ್ಟಾಗ್ರಾಂ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ತಮ್ಮ ಪತಿಯ ಹೆಸರನ್ನು ಇನ್‌ಸ್ಟಾಗ್ರಾಂ ಖಾತೆಯಿಂದ ಕೈಬಿಟ್ಟು, ಮೂಲ ಹೆಸರಿಗೆ ಮರಳಿದ್ದಾರೆ.

ಅವರು ತಮ್ಮ ಹೆಸರನ್ನು ಶ್ರೀಜಾ ಕೊನಿಡೇಲಾ ಎಂದು ಬದಲಿಸಿಕೊಂಡಿದ್ದು, ನಟ ಕಲ್ಯಾಣ್‌ ದೇವ್‌ ಅವರನ್ನು ಅನ್‌ಫಾಲೋ ಮಾಡಿದ್ದಾರೆ.  ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ಟಾಲಿವುಡ್‌ ಅಂಗಳದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

ಶ್ರೀಜಾ ಹಾಗೂ ಅವರ ಪತಿ ಕಲ್ಯಾಣ್ ದೇವ್  2016ರಲ್ಲಿ ಮದುವೆಯಾಗಿದ್ದರು. ಬಳಿಕ ಅವರು ‘ಶ್ರೀಜಾ ಕಲ್ಯಾಣ್’ ಎಂಬ ಹೆಸರಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿದ್ದರು. 

ಕೆಲವು ತಿಂಗಳಿಂದ ಅವರ ದಾಂಪತ್ಯ ಜೀವನ ಸರಿ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಕಲ್ಯಾಣ್‌ ದೇವ್ ಅಭಿನಯದ ‘ಸೂಪರ್ ಮಚ್ಚಿ’ ಸಿನಿಮಾ ಬಗ್ಗೆ ಚಿರಂಜೀವಿ ಕುಟುಂಬ ಮೌನವಾಗಿತ್ತು. ಇತ್ತೀಚೆಗೆ ತೆರೆಕಂಡ ಈ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೂ ಚಿರಂಜೀವಿ ಕುಟುಂಬ ಬಂದಿರಲಿಲ್ಲ. ಹಾಗೇ ಸಿನಿಮಾ ಪೋಸ್ಟರ್‌ ಅಥವಾ ಟ್ರೈಲರ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರಲಿಲ್ಲ. 

ಇದೀಗ ಶ್ರೀಜಾ ತಮ್ಮ ಪತಿಯ ಹೆಸರನ್ನು ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶ್ರೀಜಾ ಹಾಗೂ ಕಲ್ಯಾಣ್‌ ದೇವ್‌ಗೆ ಒಂದು ಮಗು ಇದೆ. 

ಕಲ್ಯಾಣ್‌ ದೇವ್‌ ಅವರನ್ನು ಮದುವೆಯಾಗುವುದಕ್ಕೂ ಮುಂಚೆ ಶ್ರೀಜಾ ಸಿರೀಶ್‌ ಭಾರದ್ವಾಜ್‌ ಅವರನ್ನು ವಿವಾಹವಾಗಿದ್ದರು.  ಶ್ರೀಜಾ- ಸಿರೀಶ್ ದಂಪತಿಗೆ ಓರ್ವ ಪುತ್ರಿಯಿದ್ದಾಳೆ.2011ರಲ್ಲಿ ಅವರಿಂದ ವಿಚ್ಛೇಧನ ಪಡೆದು 2016ರಲ್ಲಿ ಕಲ್ಯಾಣ್‌ ದೇವ್‌ ಅವರನ್ನು ಮದುವೆಯಾದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು