ಮಂಗಳವಾರ, ಅಕ್ಟೋಬರ್ 15, 2019
26 °C

ಹದಿನಾಲ್ಕು ವರ್ಷಗಳ ನಂತರ ಹೊಸ ಚಿತ್ರದಲ್ಲಿ ಚಿರಂಜೀವಿ, ತ್ರಿಷಾ ನಟನೆ

Published:
Updated:

ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ  ‘ಸೈರಾ ನರಸಿಂಹ ರೆಡ್ಡಿ’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈಗ ತಮ್ಮ ಹೊಸ ಚಿತ್ರದ ತಯಾರಿಯಲ್ಲಿ ಚಿರಂಜೀವಿ ತೊಡಗಿಸಿಕೊಂಡಿದ್ದಾರೆ. 

‘ಮಿರ್ಚಿ’, ‘ಜನತಾ ಗ್ಯಾರೇಜ್’, ‘ಶ್ರೀಮಂತುಡು’, ‘ಭರತ್‌ ಆನೆ ನೇನು’ ಮೊದಲಾದ ಹಿಟ್‌ ಚಿತ್ರಗಳನ್ನು ನೀಡಿರುವ ನಿರ್ದೇಶಕ ಕೊರಟಾಳ ಶಿವ ಈ  ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಹೊಸ ಚಿತ್ರಕ್ಕೆ ನಾಯಕಿಯಾಗಿ ನಟಿ ತ್ರಿಷಾ ಕೃಷ್ಣನ್‌ ಅವರು ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ.

ಈ ಚಿತ್ರಕ್ಕೆ ಮೊದಲು ಕಾಜಲ್‌ ಅಗರವಾಲ್‌, ಹುಮಾ ಖುರೇಶಿ, ತಮನ್ನಾ ಭಾಟಿಯಾ, ಹಾಗೂ ನಯನತಾರಾ ಹೆಸರು ಕೇಳಿಬಂದಿತ್ತು. ಆದರೆ ಈಗ ಚಿತ್ರತಂಡವು ನಾಯಕಿ ಸ್ಥಾನಕ್ಕೆ ತ್ರಿಷಾ ಅವರನ್ನು ಆಯ್ಕೆ ಮಾಡಿದೆ.  ತ್ರಿಷಾ ಹಾಗೂ ಚಿರಂಜೀವಿ ಈ ಮುನ್ನ ಎ.ಆರ್‌. ಮುರುಗದಾಸ್‌ ಅವರ ಸ್ಟಾಲಿನ್‌ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ಎಲ್ಲವೂ ಸರಿಹೋದರೆ 14 ವರ್ಷಗಳ ನಂತರ ಮತ್ತೊಮ್ಮೆ ಈ ಜೋಡಿಯನ್ನು ತೆರೆಯಲ್ಲಿ ಸದ್ಯದಲ್ಲೇ ನೋಡಬಹುದು. ‘ದಮ್ಮು’ ಸಿನಿಮಾವು ತ್ರಿಷಾ ನಟಿಸಿದ ಕೊನೆಯ ತೆಲುಗು ಚಿತ್ರ. ಇದರಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ನಾಯಕಿಯಾಗಿ ನಟಿಸಿದ್ದರು. ಅನಂತರ ತಮಿಳು ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದರು. 

ಇದನ್ನೂ ಓದಿ: ಪ್ರೀ ರಿಲೀಸ್ | 'ಸೈರಾ' ನನ್ನ ವೃತ್ತಿಬದುಕಿನ ಉಸಿರು ಎಂದ ಚಿರಂಜೀವಿ

Post Comments (+)