ನಟ ಅಖಿಲ್ ಅಕ್ಕಿನೇನಿ ಅವರ ಹೊಸ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಭಾಸ್ ಅವರ ಮುಂದಿನ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದು, ಅದರ ಬೆನ್ನಲ್ಲೇ, ಅಖಿಲ್ ಅಕ್ಕಿನೇನಿ ಅಭಿನಯದ ನಾಲ್ಕನೇ ಚಿತ್ರಕ್ಕೆ ನಾಯಕಿಯಾಗಿ ಸಹಿ ಮಾಡಿದ್ದಾರೆ.

ದಕ್ಷಿಣ ಭಾರತದ ನಟಿಯರಲ್ಲಿ ಮುಂಚೂಣಿಯಲ್ಲಿ ಈ ನಟಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಈಗ ಅನೇಕ ಸಿನಿಮಾ ಕತೆಗಳಿವೆ. ಸ್ಟಾರ್ ನಟರ ಜೊತೆಯೇ ನಟಿಸುವ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಮಹೇಶ್ ಬಾಬು ‘ಮಹರ್ಷಿ’ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದರು.

ಈ ಹೊಸ ಚಿತ್ರದಲ್ಲಿ ಗಂಭೀರ ಹಾಗೂ ಆತ್ಮವಿಶ್ವಾಸದ ಯುವತಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಖಿಲ್ ಅವರದು ಮೃದು ಹಾಗೂ ಮೌನ ಸ್ವಭಾವದ ನಾಯಕನ ಪಾತ್ರ. ಇದರಲ್ಲಿ ಅಖಿಲ್ ತುಂಬಾ ಸ್ಟೈಲಾಗಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಚಿತ್ರತಂಡದ್ದು.

ಈ ಮೊದಲು ಈ ಚಿತ್ರದ ನಾಯಕಿ ಪಾತ್ರಕ್ಕೆ ಹೊಸ ಮುಖಕ್ಕಾಗಿ ಚಿತ್ರತಂಡ ಹುಡುಕಾಟ ನಡೆಸಿತ್ತು. ಆದರೆ ಈಗ ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತರಾಗಿರುವ ಪೂಜಾ ಹೆಗ್ಡೆಯವರನ್ನೇ ನಾಯಕಿ ಪಾತ್ರಕ್ಕೆ ನಟಿಸುವಂತೆ ಕೇಳಿಕೊಂಡರು ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ಪೂಜಾ ಹೆಗ್ಡೆ ಭಾರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಚಿತ್ರವನ್ನು ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಈ ತಿಂಗಳಲ್ಲಿಯೇ ಸೆಟ್ಟೇರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.