ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ ಉತ್ಸವ: ಚೆಲುವೆಯ ಚರಿಸ್ಮಾ

Published 25 ಮೇ 2024, 0:49 IST
Last Updated 25 ಮೇ 2024, 0:49 IST
ಅಕ್ಷರ ಗಾತ್ರ

77ನೆಯ ಕಾನ್‌ ಉತ್ಸವಕ್ಕೆ ತೆರೆ ಬಿದ್ದಿದ್ದರೂ ನಟಿ ಐಶ್ವರ್ಯ ರೈ ಅವರ ಔಟ್‌ ಫಿಟ್‌ ಬಗೆಗಿನ ಟೀಕೆಗಳು ಮುಂದುವರಿಯುತ್ತಲೇ ಇವೆ. ರಜತ ಮತ್ತು ನೀಲಿ ವರ್ಣಸಂಯೋಜನೆಯ ಅವರ ಗೌನು ಈ ಸಲ ಅಭಿಮಾನಿಗಳ ಮೆಚ್ಚುಗೆ ಪಡೆಯಲಿಲ್ಲ. ಪ್ರತಿಸಲವೂ ವಿಶೇಷ ಗೌನುಗಳಿಂದ ಗಮನಸೆಳೆಯುತ್ತಿದ್ದರು.  ಐಶ್ವರ್ಯ ರೈ ಬಚ್ಚನ್‌, ಈ ಸಲ ಮಣಿಕಟ್ಟಿನ ಮೂಳೆ ಮುರಿದಿದ್ದರೂ ತಮ್ಮ ಬದ್ಧತೆಯನ್ನು ಪ್ರದರ್ಶಿಸುವಂತೆ ಪ್ಲಾಸ್ಟರ್‌ನೊಂದಿಗೆ ಕಪ್ಪು ಮತ್ತು ಬೆಳ್ಳಿ ಬಣ್ಣದ ಗೌನುಗಳಲ್ಲಿ ಮಿಂಚಿದರು.

ಎಂದಿನಂತೆ ಅವರ ವಿನ್ಯಾಸಕ ಸ್ನೇಹಿತರು ಶಾನೆ ಮತ್ತು ಫಾಲ್ಗುಣಿ ಪಿಕಾಕ್‌ ವಿನ್ಯಾಸದ ಈ ಗೌನುಗಳು ಐಶ್ವರ್ಯ ರೈ ಅಭಿಮಾನಿಗಳ ಟೀಕೆ ಎದುರಿಸುವಂತಾಯಿತು. ಎಕ್ಸ್‌ ವೇದಿಕೆಯಲ್ಲಿ ಐಶ್ವರ್ಯ ರೈ ಅವರಿಗೆ ಸ್ಟ್ರಾಗಳೇ ಬೇಕಿದ್ದವೇ? ಲಾರಿಗೆ ತೂಗಿಹಾಕುವ ಅಲಂಕಾರಿಕ ವಸ್ತುಗಳಿಂದ ಉಡುಗೆ ಮಾಡಿಸಿದರೆ ಎಂಬಂಥ ಕಟುವಾದ ಟೀಕೆಗಳನ್ನು ಎದುರಿಸಬೇಕಾಯಿತು.

ಕಾನ್‌ನಿಂದ ಮರಳಿದ ಐಶ್ವರ್ಯ ರೈ ಮಾತ್ರ, ಈ ಉಡುಗೆಗಳು ಚಮತ್ಕಾರಿಕವಾಗಿದ್ದವು. ಅವುಗಳನ್ನು ಧರಿಸಿದ ಕ್ಷಣಗಳನ್ನು ’ಮ್ಯಾಜಿಕಲ್‌‘ ಎಂದೂ ಉತ್ತರಿಸಿ, ತಮ್ಮ ವಿನ್ಯಾಸಕರ ಬೆಂಬಲಕ್ಕೆ ನಿಂತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT