ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮದುವೆ ಮಾಡಿ ಸರಿ ಹೋಗ್ತಾನೆ’ ಸಿನಿಮಾ ಶೀಘ್ರ

ಗಂಗಾವತಿ ಸಿನಿ ತಂಡದಿಂದ ಟೀಸರ್, ಮೋಷನ್ ಪೋಸ್ಟರ್ ಬಿಡುಗಡೆ
Last Updated 11 ಡಿಸೆಂಬರ್ 2019, 13:06 IST
ಅಕ್ಷರ ಗಾತ್ರ

ಕೊಪ್ಪಳ: ಗ್ರಾಮೀಣ ಭಾಗದ ಯುವಕನ ತಲ್ಲಣಗಳು, ಉದ್ಯೋಗಕ್ಕೆ ರಾಜಧಾನಿಗೆ ಬಂದು ಅನುಭವಿಸಿದ ತೊಂದರೆ, ಸಾಧಕನಾಗಿ ಊರು ಸೇರಿದ ಯುವಕನ ಕಥೆಯನ್ನು ಇಟ್ಟುಕೊಂಡುಅಪ್ಪಟ ಉತ್ತರ ಕರ್ನಾಟಕದ ಜವಾರಿ ಭಾಷೆಯ ಚಿತ್ರ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಶಿವರಾಜ ದೇಸಾಯಿ ತಿಳಿಸಿದರು.

ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ 'ಮದುವೆ ಮಾಡ್ರೀ ಸರಿ ಹೋಗ್ತಾನೆ' ಮಾತನಾಡಿ, ನಮ್ಮ ಭಾಗದಲ್ಲಿ ಅನೇಕ ಪ್ರತಿಭೆಗಳು ಇವೆ. ಅಲ್ಲದೆ ನಮ್ಮ ಭಾಷೆಯನ್ನು ವ್ಯಂಗ್ಯವಾಗಿ ಬಳಸುವುದನ್ನು ನೋಡಿ ಬೇಸರವಾಗುತ್ತಿತ್ತು. ಆದ್ದರಿಂದ ಸಶಕ್ತ ಭಾಷೆಯ ಮೂಲಕ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ಖಂಡಿತಾ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.

ಗೋಪಿ ಕೆರೂರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಎಸ್‌ಎಲ್‌ಡಿ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗಿದೆ. ಡಾ.ವಿ.ನಾಗೇಂದ್ರ ಬಾಬು, ಕೆ.ಕಲ್ಯಾಣಸಾಹಿತ್ಯದಲ್ಲಿ 11 ಹಾಡುಗಳನ್ನು ಅಳವಡಿಸಲಾಗಿದೆ. ಗಂಗಾವತಿ ಬೀಚಿ, ಹಾಸ್ಯಬ್ರಹ್ಮ ಪ್ರಾಣೇಶ್ ಅವರು ಧ್ವನಿ ನೀಡಿದ್ದಾರೆ. ಪೋಸ್ಟರ್‌ ಅನ್ನು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದ್ದು, ಹೊಸಬರ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಭಾಗದ ಪಡ್ಡೆ ಹುಡುಗನಿಗೆ ಮದುವೆ ಮಾಡಿದರೆ ಎಲ್ಲ ಸರಿ ಹೋಗುತ್ತದೆ ಎನ್ನುವ ಅಂಶ ಇಟ್ಟುಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾ ರಚನೆ ಮಾಡಲಾಗಿದೆ. ನಾಯಕ ನಟ ಬಾಗಲಕೋಟೆಯ ಶಿವಚಂದ್ರಕುಮಾರ್, ನಾಯಕಿಯಾಗಿ ಆರಾಧ್ಯ, ಹಿರಿಯ ಕಲಾವಿದರಾದ ರಮೇಶ ಭಟ್, ಅರುಣ ಬಾಲರಾಜ್, ಮಿಮಿಕ್ರಿ ಗೋಪಿ, ಚಿತ್ಕಳಾ ಬಿರಾದಾರ, ಸದಾನಂದ ಕಾಳಿ, ಕೃಷ್ಣ ಮೂರ್ತಿ ಕವಾತ್ತಾರ್, ಚಕ್ರವರ್ತಿ ಮುಂತಾದವರು ಅಭಿನಯಿಸಿದ್ದಾರೆ.

ಬಾಲಿವುಡ್ ಗಾಯಕರಾದ ಅಂಕಿತ್ ಖಂಡು, ನಕುಲ್ ಅಭಯಂಕರ್, ಅನನ್ಯ ಭಟ್ ಮುಂತಾದವರುಗಾಯನ, ಅವಿನಾಶ್ ಭಾಸುತ್ಕರ್ ಸಂಗೀತ, ಸುರೇಶ ಬಾಬು, ರವಿರಾಜ್ ಹೊಂಬಳ ಛಾಯಾಗ್ರಹಣ, ವೆಂಕಿ ಸಂಕಲನ ಮಾಡಿದ್ದಾರೆ. 110 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಬ್ಸಿಡಿ ಆಶೆಗೆ ಸಿನಿಮಾ ನಿರ್ಮಾಣ ಮಾಡಿಲ್ಲ. ಆಯ್ಕೆಯಾಗುತ್ತದೆ ಎಂಬ ನಂಬಿಕೆಯೂ ಇಲ್ಲ. ₹ 2 ಕೋಟಿ ಖರ್ಚು ಮಾಡಿಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟಶಿವಚಂದ್ರಕುಮಾರ್, ಮುಖಂಡ ಅಮರೇಶ ದೇಸಾಯಿ, ತಂತ್ರಜ್ಞ ಶಿವಚೇತನ್, ಸುರೇಶ ದಾಸರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT