ಬುಧವಾರ, ಮೇ 18, 2022
21 °C

ಕನ್ನಡ ಚಿತ್ರಗಳಿಗೆ ಹೊಸ ಒಟಿಟಿ ಆ್ಯಪ್‌ ‘ಸಿನಿಬಜಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ಕನ್ನಡ ಚಿತ್ರಗಳಿಗೆ ಹೊಸ ಒಟಿಟಿ ಆ್ಯಪ್‌ ಬಂದಿದೆ. ‘ಸಿನಿಬಜಾರ್‌’ ಅದರ ಹೆಸರು. ಭಾಸ್ಕರ ವೆಂಕಟೇಶ್‌ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಈ ಆ್ಯಪ್‌ನ ಪ್ರವರ್ತಕರು.

‘ಪ್ರತಿ ಸಿನಿಮಾ ವೀಕ್ಷಣೆಗೆ ₹ 25ರಿಂದ 30 ವೆಚ್ಚವಾಗಲಿದೆ. ವೀಕ್ಷಕರ ಪ್ರಮಾಣವೂ ಇದರಲ್ಲೇ ಗೊತ್ತಾಗಲಿದೆ. ಪ್ರದರ್ಶನ, ಧ್ವನಿ ಪರಿಣಾಮಕ್ಕೆ ಸರಿಯಾದ ತಂತ್ರಜ್ಞಾನ ಬಳಸಿದ್ದೇವೆ. ಈ ಆ್ಯಪ್‌ ಮೂಲಕವೇ ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆ ಮಾಡಬಹುದು. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಗಳೂ ಈಗಾಗಲೇ ಭಂಡಾರದಲ್ಲಿವೆ’ ಎಂದು ಭಾಸ್ಕರ್ ವೆಂಕಟೇಶ್ ಹೇಳಿದರು.

‘ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ’ ಎಂದರು ಉಮೇಶ್ ಬಣಕಾರ್.

ಸುಧಾಕರ್‌ ಅವರು ಈ ಆ್ಯಪನ್ನು ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್‌.ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು