ಬುಧವಾರ, ಸೆಪ್ಟೆಂಬರ್ 30, 2020
19 °C

ಡ್ರಗ್ಸ್ ದಂಧೆ: ನಾಳೆಯೇ ವಿಚಾರಣೆಗೆ ಬನ್ನಿ; ನಟಿ ರಾಗಿಣಿಗೆ ಪೊಲೀಸರ ಎಚ್ಚರಿಕೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋಮವಾರ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಸಿಸಿಬಿ ಪೊಲೀಸರು, ಶುಕ್ರವಾರ ಬೆಳಿಗ್ಗೆಯೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

‘ಡ್ರಗ್ ಮಾಫಿಯಾ ಯುವ ಪೀಳಿಗೆಯನ್ನು ಹಾಳು ಮಾಡುತ್ತಿದೆ. ಇದು ಗಂಭೀರ ವಿಷಯ. ಯಾವುದೇ ನೆಪ ಬೇಡ. ಶುಕ್ರವಾರ ಬೆಳಿಗ್ಗೆ ಸಿಸಿಬಿ ಕಚೇರಿಗೆ ಬಂದು ವಿಚಾರಣೆ ಎದುರಿಸಬೇಕು. ಇಲ್ಲದಿದ್ದರೆ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಸಿಸಿಬಿಯ ಮೊದಲ ನೋಟಿಸ್‌ಗೆ ಉತ್ತರಿಸಿರುವ ರಾಗಿಣಿ, ‘ಸಮಯದ ಅಭಾವದಿಂದ ವಿಚಾರಣೆಗೆ ಬರಲು ಆಗುತ್ತಿಲ್ಲ. ನನ್ನ ಪರ ವಕೀಲರು ಕಚೇರಿಗೆ ಬರಲಿದ್ದಾರೆ. ನಾನು ಸೋಮವಾರ ವಿಚಾರಣೆಗೆ ಬರುತ್ತೇನೆ. ಕಾಲಾವಕಾಶ ನೀಡಿ’ ಎಂದಿದ್ದರು. ಅದಕ್ಕೆ ಒಪ್ಪದ ಪೊಲೀಸರು, ಶುಕ್ರವಾರ ಕಡ್ಡಾಯವಾಗಿ ವಿಚಾರಣೆಗೆ ಬರುವಂತೆ ವಕೀಲರ ಮೂಲಕ ಲಿಖಿತವಾಗಿಯೇ ಹೇಳಿ ಕಳುಹಿಸಿದ್ದಾರೆ.

ಇದನ್ನೂ ಓದಿ... ಡ್ರಗ್ಸ್ ದಂಧೆ | ಸಿಸಿಬಿ ಕಚೇರಿಗೆ ಸೋಮವಾರ ಹೋಗುವೆ: ರಾಗಿಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು