ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದೆದೆಯಲ್ಲಿ ಲಕ್ಷ್ಮಿದೇವಿ ಇರುವ ಆಭರಣ– ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

Last Updated 28 ಮಾರ್ಚ್ 2023, 11:09 IST
ಅಕ್ಷರ ಗಾತ್ರ

ಇಂದೋರ್‌: ಫ್ಯಾಶನ್ ಶೋ ಒಂದರಲ್ಲಿ, ತೆರೆದೆದೆಯಲ್ಲಿ ಹಿಂದೂ ದೇವತೆಯಾದ ಲಕ್ಷ್ಮಿ ಚಿತ್ರವಿರುವ ಆಭರಣ ಹಾಕಿಕೊಂಡು ಪ್ರದರ್ಶನ ಮಾಡಿದ್ದಕ್ಕೆ ನಟಿ ತಾಪ್ಸಿ ಪನ್ನು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಈ ವಿಷಯವಾಗಿ ನಟಿಯ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ಅವರು ಛತ್ರಿಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಪ್ಸಿ ಅವರಿಗೆ ನೋಟಿಸ್ ಕಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ತಿಳಿಸಿದೆ.

ಏಕಲವ್ಯ ಗೌರ್ ಅವರು ‘ಹಿಂದ್ ರಕ್ಷಕ್ ಸಂಘಟನಾ’ದ ಸಂಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಮಾರ್ಚ್ 12 ರಂದು ಮುಂಬೈನಲ್ಲಿ ಆಯೋಜಿಸಿದ್ದ ಫ್ಯಾಶನ್ ಶೋ ಒಂದರಲ್ಲಿ ತಾಪ್ಸಿ, ಲಕ್ಷ್ಮಿದೇವಿಯ ದೊಡ್ಡ ಚಿತ್ರವಿರುವ ನೆಕ್‌ಲೆಸ್‌ ಅನ್ನು ತೆರೆದೆದೆಯಲ್ಲಿ ಪ್ರದರ್ಶನ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದ್ದವು. ಆದರೆ, ಈ ಬಗ್ಗೆ ತಾಪ್ಸಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಪ್ಸಿ ಪನ್ನು ಅವರು ಹಿಂದಿ, ತೆಲುಗು ತಮಿಳಿನಲ್ಲಿ ಒಟ್ಟಾರೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಫೀಲ್ಮ್‌ಫೇರ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶಾರುಖ್ ಜೊತೆಗಿನ ಅವರ ಮುಂದಿನ ಚಿತ್ರ ‘ಡುಂಕಿ’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT