ಮಂಗಳವಾರ, ಜನವರಿ 25, 2022
25 °C

ಕತ್ರೀನಾ ಕೈಫ್– ವಿಕ್ಕಿ ಕೌಶಲ್ ಮದುವೆಗಾಗಿ ರಸ್ತೆ ಬಂದ್!: ಪ್ರಕರಣ ದಾಖಲು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

IANS Photo

ಬೆಂಗಳೂರು: ಬಾಲಿವುಡ್‌ನಲ್ಲೀಗ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯದ್ದೇ ಸದ್ದು.. ಅತ್ಯಂತ ಖಾಸಗಿ ಸಮಾರಂಭವಾಗಿ ಮದುವೆ ನಡೆಯುತ್ತಿದೆ.

ಮದುವೆ ಸಿದ್ಧತೆಗಳು ಸೋಮವಾರದಿಂದಲೇ ಆರಂಭವಾಗಿದೆ.

ಆದರೆ ಮದುವೆಗೆ ತೆರಳುವ ಅತಿಥಿಗಳ ಅನುಕೂಲಕ್ಕಾಗಿ ಮತ್ತು ಆಹ್ವಾನಿತರಲ್ಲದವರ ಪ್ರವೇಶವನ್ನು ತಡೆಯುವುದಕ್ಕಾಗಿ ರಾಜಸ್ಥಾನದ ಗ್ರಾಮವೊಂದರಲ್ಲಿ ರಸ್ತೆಯನ್ನೇ ಬಂದ್ ಮಾಡಲಾಗಿದೆ.

ಮದುವೆಗಾಗಿ ಬರುವ ಅತಿಥಿಗಳು ತಂಗುವ ಹೋಟೆಲ್ ಸಿಕ್ಸ್ ಸೆನ್ಸಸ್ ಸಮೀಪದ ಚೌತ್ ಮಠದ ಸಮೀಪದ ರಸ್ತೆಯನ್ನು ಮದುವೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಬಂದ್ ಮಾಡಿಸಿದ್ದಾರೆ.

ಅಲ್ಲದೆ, ಅದಕ್ಕಾಗಿ ಹೋಟೆಲ್ ಮ್ಯಾನೇಜರ್ ಮತ್ತು ಮದುವೆಯ ಈವೆಂಟ್ ಮ್ಯಾನೇಜರ್ ಅಲ್ಲಿನ ಜಿಲ್ಲಾಧಿಕಾರಿಯ ಸಹಕಾರವನ್ನೂ ಪಡೆದಿದ್ದಾರೆ.

ಈ ಬಗ್ಗೆ ನ್ಯಾಯವಾದಿ ನೇತ್ರವಿಂದ್ ಸಿಂಗ್ ಜಾದೂನ್ ಎಂಬವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಸಮಾರಂಭಕ್ಕಾಗಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸಮಾರಂಭಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಮಂದಿರಕ್ಕೆ ತೆರಳುವ ರಸ್ತೆಯನ್ನು ಸಾರ್ವಜನಿಕರಾಗಿ ಮುಕ್ತಗೊಳಿಸಬೇಕು ಎನ್ನುವುದು ನೇತ್ರವಿಂದ್ ಅವರ ಒತ್ತಾಯವಾಗಿದೆ.

ಮೂಲಗಳ ಪ್ರಕಾರ, ಡಿಸೆಂಬರ್ 7ರಂದು ಸಂಗೀತ್, 8ರಂದು ಮೆಹಂದಿ ಮತ್ತು ಡಿ. 9ರಂದು ಕತ್ರೀನಾ–ವಿಕ್ಕಿ ಮದುವೆ ನಡೆಯಲಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು