ಬುಧವಾರ, ಜನವರಿ 26, 2022
23 °C

ಸಿನಿಮಾ: ಬರ್ತಾ ಇದೆ ಕಾನ್ಸೀಲಿಯಂ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಾನ್ಸೀಲಿಯಂ’ ಕನ್ನಡದಲ್ಲಿ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಸಿದ್ಧವಾಗುತ್ತಿದೆ. ಐಟಿ ಉದ್ಯೋಗಿಗಳು ಸೇರಿ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಡಿಎನ್ಎ, ಬಾಹ್ಯಾಕಾಶ ತಂತ್ರಜ್ಞಾನ ಇತ್ಯಾದಿ ವಿಷಯಗಳನ್ನಿಟ್ಟುಕೊಂಡು ಮನೋವೈಜ್ಞಾನಿಕ ಥ್ರಿಲ್ಲರ್‌ ಕತೆಯೊಂದನ್ನು ತೆರೆಗೆ ತರಲು ಯತ್ನ ನಡೆದಿದೆ. ಸಮರ್ಥ್ ಈ ಚಿತ್ರದ ನಿರ್ದೇಶಕರು ಮತ್ತು ಪ್ರಧಾನ ಪಾತ್ರದಲ್ಲಿದ್ದಾರೆ. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ.

‘ಕಾನ್ಸೀಲಿಯಂ’ ಅನ್ನೋದು ಲ್ಯಾಟಿನ್ ಪದ... ಯೋಜನೆ, ನಿರ್ಧಾರ, ಸಲಹೆ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡಿರುವುದರಿಂದ ‘ಕಾನ್ಸೀಲಿಯಂ’ ಅನ್ನುವ ಶೀರ್ಷಿಕೆ ಇಡಲಾಗಿದೆ ಎಂದಿದೆ ಚಿತ್ರತಂಡ. 

ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್ ನಡಿ ತಯಾರಾಗಿರುವ ಕಾನ್ಸೀಲಿಯಂ ಸಿನಿಮಾದಲ್ಲಿ ಪ್ರೀತಂ, ಮನೆದೇವ್ರು ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ. ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕಿ ಆಗಿದ್ದಾರೆ. ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು