‘ಮೈ ತೋ ರಸ್ತೆ ಸೆ ಜಾ ರಹಾ ಥಾ...’ ಹಾಡು ರಿಮೇಕ್‌

ಭಾನುವಾರ, ಜೂಲೈ 21, 2019
28 °C

‘ಮೈ ತೋ ರಸ್ತೆ ಸೆ ಜಾ ರಹಾ ಥಾ...’ ಹಾಡು ರಿಮೇಕ್‌

Published:
Updated:
Prajavani

‘ಕೂಲಿ ನಂ.1’ ರಿಮೇಕ್‌ ಚಿತ್ರದಲ್ಲಿ ಮೂಲ ಚಿತ್ರದ ‘ಮೈ ತೊ ರಸ್ತೆ ಸೆ ಜಾ ರಹಾ ಥಾ’ ಹಾಡನ್ನು ಮರುಸೃಷ್ಟಿಸಲಾಗುತ್ತದೆ. 

1995ರಲ್ಲಿ ಬಿಡುಗಡೆಯಾದ, ಡೇವಿಡ್‌ ಧವನ್‌ ನಿರ್ದೇಶನದ ‘ಕೂಲಿ ನಂ.1’ ರಿಮೇಕ್‌ ಚಿತ್ರದಲ್ಲಿ ವರುಣ್‌ ಧವನ್‌ ಹಾಗೂ ಸಾರಾ ಆಲಿ ಖಾನ್‌ ನಟಿಸುತ್ತಿದ್ದಾರೆ. ‘ಕೂಲಿ ನಂ.1’ ಚಿತ್ರದ ರಿಮೇಕ್‌ ಮಾಡುವ ಸುದ್ದಿ ಪ್ರಕಟವಾದಾಗಿನಿಂದ ಈ ಚಿತ್ರದ ಪ್ರಸಿದ್ಧ ಹಾಡು ‘ಮೈ ತೋ ರಸ್ತೆ...’ ಹಾಡು ಈ ಚಿತ್ರದಲ್ಲಿರುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಮಾನಿಗಳು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಇಂಥ ಸಂದೇಹಗಳಿಗೆ ಡೇವಿಡ್‌ ಉತ್ತರಿಸಿದ್ದಾರೆ. 

ಮೂಲ ಸಿನಿಮಾದಲ್ಲಿ ನಟ ಗೋವಿಂದ ಹಾಗೂ ಕರಿಷ್ಮಾ ಕಪೂರ್‌ ಜೋಡಿಯ ನಟನೆ, ಹಾಸ್ಯ, ನೃತ್ಯಗಳಿಂದ ಸಿನಿಮಾ ಭಾರಿ ಹೆಸರು ಗಳಿಸಿತ್ತು. ರಿಮೇಕ್‌ ಸಿನಿಮಾ ಕೂಡ ಹಾಸ್ಯಪ್ರಧಾನ ಚಿತ್ರ ಎನ್ನುವುದು ಚಿತ್ರತಂಡದ ಭರವಸೆ. 

ಈ ಹಾಡನ್ನು ಖಂಡಿತ ಮರುಸೃಷ್ಟಿಸಲಾಗುವುದು. ಈ ಸಿನಿಮಾದಲ್ಲಿ ಬಹುಮುಖ್ಯ ಭಾಗವೇ ಅದು. ರಿಮೇಕ್‌ ಹಾಡಿನಲ್ಲಿ ವರುಣ್‌ ಹಾಗೂ ಸಾರಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಡೇವಿಡ್‌ ಹೇಳಿದ್ದರು. 

ಆಗಸ್ಟ್‌ 5ರಂದು ಈ ರಿಮೇಕ್‌ ಚಿತ್ರದ ಮುಹೂರ್ತ ನಡೆಯಲಿದೆ. 2020ರ ಮೇ 1ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

Post Comments (+)