ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ನಯನತಾರಾಗೆ ಕೊರೊನಾ ಪಾಸಿಟಿವ್‌! ಸುಳ್ಳುಸುದ್ದಿ

Last Updated 22 ಜೂನ್ 2020, 6:30 IST
ಅಕ್ಷರ ಗಾತ್ರ

ನಟಿ ನಯನತಾರಾಗೆ ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದಿದೆ ಎಂಬ ಸುದ್ದಿ ನಿನ್ನೆಯಿಂದ ಎಲ್ಲೆಡೆ ಹರಡುತ್ತಿದೆ. ಆದರೆ ಈ ಸುದ್ದಿಯನ್ನು ಗಾಳಿಸುದ್ದಿ ಎನ್ನುತ್ತಿವೆ ಮೂಲಗಳು. ‌‌

ಚೆನ್ನೈನಲ್ಲಿ ವಾಸ ಇರುವ ನಯನತಾರಾ ಹಾಗೂ ಪ್ರಿಯಕರ ವಿಗ್ನೇಶ್ ಶಿವನ್ ಕೊರೊನಾ ಪರೀಕ್ಷೆ ಮಾಡಿಸಿದ್ದು ಪಾಸಿಟಿವ್ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ತಮಿಳಿನ ಪ್ರಮುಖ ಸುದ್ದಿಪತ್ರಿಕೆಯೊಂದು ಈ ವಿಷಯವನ್ನು ಮೊದಲಿಗೆ ಪ್ರಕಟಿಸಿತ್ತು. ಆದರೆ ಈ ಸುದ್ದಿ ಹೊರ ಬಂದ ತಕ್ಷಣಕ್ಕೆ ನಯನತಾರಾ ತಂಡ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಅಲ್ಲದೇ ಇದೊಂದು ಅಸಂಬದ್ಧ ಗಾಳಿಸುದ್ದಿ, ನಯನತಾರಾ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ತಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದಿದೆ ತಂಡ.

ಚೆನ್ನೈ ಕೋವಿಡ್ - 19 ಹಾಟ್‌ಸ್ಪಾಟ್‌ ಆಗಿರುವುದುಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಅನೇಕ ಸಿನಿ ನಟ–ನಟಿಯರು ವಾಸಿಸುತ್ತಿದ್ದಾರೆ. ನಟಿ ರಮ್ಯಾಕೃಷ್ಣ ಮಹಾಬಲಿಪುರಂನಿಂದ ಚೆನ್ನೈಗೆ ಕಾರಿನಲ್ಲಿ ಮದ್ಯದ ಬಾಟಲಿ ಸಾಗಿಸುತ್ತಿದ್ದ ವಿಷಯವೂ ದೊಡ್ಡ ಸುದ್ದಿಯಾಗಿತ್ತು. ಒಟ್ಟಾರೆ ಸಿನಿಮಾರಂಗಕ್ಕೆ ಚೆನ್ನೈ ತವರು ಮನೆಯಂದರೆ ತಪ್ಪಾಗಲಿಕ್ಕಿಲ್ಲ.

ಫನ್ನಿ ವಿಡಿಯೊ ಮೂಲಕ ಶಿವನ್ ಸ್ಪಷ್ಟನೆ

ಕೊರೊನಾ ಪಾಸಿಟಿವ್‌ ಸುದ್ದಿಗೆ ಸಂಬಂಧಿಸಿದಂತೆ ಟಿಟ್ವರ್‌ನಲ್ಲಿ ಸ್ಪಷ್ಟನೆ ನೀಡಿರುವ ಶಿವನ್‌, ಫನ್ನಿ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ. ನಯನತಾರಾ ಜೊತೆ ಫನ್ನಿ ವಿಡಿಯೊ ಮಾಡಿರುವ ಅವರು ತಮ್ಮ ಬಗ್ಗೆ ಹುಟ್ಟಿಕೊಳ್ಳುವ ಗಾಸಿಪ್‌ಗಳು ಹಾಗೂ ಸುದ್ದಿಗಳನ್ನು ನಾವು ಹೀಗೆ ತಮಾಷೆಯಾಗಿ ನೋಡುತ್ತೇವೆ ಎಂದಿದ್ದಾರೆ. ಅಲ್ಲದೇ ನಾವು ಆರೋಗ್ಯಕರವಾಗಿ ಸಂತೋಷದಿಂದ ಬದುಕಿದ್ದೇವೆ. ದೇವರು ನಮಗೆ ಆಯುರಾರೋಗ್ಯವನ್ನು ಕೊಟ್ಟಿದ್ದಾನೆ. ಜೋಕರ್‌ಗಳಾದ ನಿಮ್ಮ ಕಲ್ಪನೆಗಳು ಹಾಗೂ ನೀವು ಮಾಡುವ ಜೋಕ್‌ಗಳಿಂದ ನಾವು ಸಂತೋಷ ಪಡುತ್ತೇವೆ ಎಂದಿದ್ದಾರೆ.

ಚೆನ್ನೈನಲ್ಲಿ ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಅನೇಕ ತಮಿಳು ನಟ – ನಟಿಯರು ಈ ಪಟ್ಟಣದಿಂದ ದೂರ ಹೋಗುತ್ತಿದ್ದಾರೆ. ತಮಿಳುನಾಡಿನ ಹೊರಭಾಗದಲ್ಲಿರುವ ಹಾಗೂ ಕೇರಳದಲ್ಲಿರುವ ತಮ್ಮ ಫಾರ್ಮ್‌ಹೌಸ್ ಹಾಗೂ ರೆಸಾರ್ಟ್‌ಗಳಲ್ಲಿ ವಾಸಿಸುತ್ತಿದ್ದಾರೆ.

ನಿರ್ದೇಶಕ ವಿಗ್ನೇಶ್‌ ಶಿವನ್‌ ಜೊತೆ ಕೆಲ ವರ್ಷಗಳಿಂದ ಸಹಜೀವನ ನಡೆಸುತ್ತಿದ್ದ ನಯನತಾರಾ ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT