ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನಗಳಲ್ಲಿ ₹62 ಕೋಟಿ ಗಳಿಸಿದ ಕರೀನಾ, ಕೃತಿ ಸನೋನ್, ಟಬು ಅಭಿನಯದ ‘ಕ್ರೂ’

Published 1 ಏಪ್ರಿಲ್ 2024, 12:39 IST
Last Updated 1 ಏಪ್ರಿಲ್ 2024, 12:39 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅಭಿನಯದ ‘ಕ್ರೂ‘ ಸಿನಿಮಾವು ವಿಶ್ವದಾದ್ಯಂತ ತೆರೆಕಂಡಿದ್ದು, ಮೂರು ದಿನಗಳಲ್ಲಿ ಒಟ್ಟು ₹62.53 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರೊಡಕ್ಷನ್‌ ಹೌಸ್‌ ಬಾಲಾಜಿ ಮೋಷನ್‌ ಪಿಕ್ಚರ್ಸ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕ್ರೂ ಚಿತ್ರದ ಕಲೆಕ್ಷನ್‌ ಅಪ್‌ಡೇಟ್ಸ್‌ ಅನ್ನು ಹಂಚಿಕೊಂಡಿದೆ. ಈ ಚಿತ್ರವು ಬಿಡುಗಡೆಯಾದ ಮೂರು ದಿನಗಳಲ್ಲಿ ₹62.53 ಕೋಟಿ ಗಳಿಸಿದೆ ಎಂದು ತಿಳಿಸಿದೆ.

ಶುಕ್ರವಾರ (ಮಾರ್ಚ್‌ 29)ರಂದು ಬಿಡುಗಡೆಯಾದ ಕ್ರೂ ಚಿತ್ರವು ಕಾಮಿಡಿ, ಕಳ್ಳತನ ಸೇರಿದಂತೆ ವಿಭಿನ್ನ ಕಥೆಯನ್ನು ಹೊಂದಿದೆ.

ರಾಜೇಶ್ ಎ ಕೃಷ್ಣನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಬಾಲಾಜಿ ಮೋಷನ್‌ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಮೂಡಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT