ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಸೈಕ್ಲೋನ್: ಸುರಕ್ಷಿತವಾಗಿರಲು ಮುಂಬೈ ಜನತೆಗೆ ನಟಿ ಪ್ರಿಯಾಂಕ ಚೋಪ್ರಾ ಸಲಹೆ

Last Updated 3 ಜೂನ್ 2020, 10:07 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಈ ವರ್ಷವು ಕಠಿಣ ಪರಿಸ್ಥಿತಿಯನ್ನು ಎನಿಸುತ್ತಿದ್ದು, ನಿಸರ್ಗ ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಂಬೈ ನಿವಾಸಿಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

ನಿಸರ್ಗ ಚಂಡಮಾರುತವು ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಮಹಾರಾಷ್ಟ್ರದ ಉತ್ತರ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮುಂಬೈನ ಪ್ರಸಿದ್ಧ ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆ ಚಿತ್ರವನ್ನು ಹಂಚಿಕೊಂಡು, 'ನನ್ನ ತಾಯಿ ಮತ್ತು ಸಹೋದರ ಸೇರಿದಂತೆ 20 ದಶಲಕ್ಷಕ್ಕೂ ಹೆಚ್ಚು ಜನರಿರುವ ನನ್ನ ಪ್ರೀತಿಯ ತವರು ನಗರವಾದ ಮುಂಬೈಗೆ ನಿಸರ್ಗ ಚಂಡಮಾರುತ ಹೋಗುತ್ತಿದೆ'. 'ಮುಂಬೈ 1891 ರಿಂದೀಚೆಗೆ ಇಂತಹ ಗಂಭೀರ ಚಂಡಮಾರುತವನ್ನು ಎದುರಿಸಿಲ್ಲ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಗತ್ತು ತುಂಬಾ ಹತಾಶವಾಗಿರುವ ಸಮಯದಲ್ಲಿ, ಇದು ವಿಶೇಷವಾಗಿ ವಿನಾಶಕಾರಿಯಾಗಿದೆ' ಎಂದು ಬರೆದಿದ್ದಾರೆ.

ಈ ವರ್ಷವು ಅತ್ಯಂತ ಕಠಿಣವಾಗಿದೆ. ದಯವಿಟ್ಟು ಪ್ರತಿಯೊಬ್ಬರು ಕ್ಷೇಮವಾಗಿರುವಂತೆ ನೋಡಿಕೊಳ್ಳಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದಿರುವ ಪ್ರಿಯಾಂಕಾ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪುಟಕ್ಕೆ ಸ್ವೈಪ್ ಅಪ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಅದು ನಿಸರ್ಗ ಚಂಡಮಾರುತವನ್ನು ಎದುರಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು ಎನ್ನುವ ವಿವರಗಳನ್ನು ಒಳಗೊಂಡಿದೆ.

ಮಂಗಳವಾರವಷ್ಟೇ, ನಟ ವಿಕ್ಕಿ ಕೌಶಲ್ ಅವರು ಮೋಡ ಕವಿದ ಆಕಾಶದ ಚಿತ್ರವನ್ನು ಹಂಚಿಕೊಂಡರು ಮತ್ತು 'ಮೊದಲ ಮಳೆ ಮಾತ್ರ ಪರಿಹಾರ ಮತ್ತು ಸಂತೋಷವನ್ನು ತರುತ್ತದೆ ಮತ್ತು ಹೆಚ್ಚು ನಾಟಕವಲ್ಲ' ಎಂದು ಬರೆದುಕೊಂಡಿದ್ದರು. ಅಲ್ಲದೆ ಜನರು ಸುರಕ್ಷಿತವಾಗಿರುವಂತೆ ಒತ್ತಾಯಿಸಿದರು.

129 ವರ್ಷಗಳಲ್ಲಿ ಮುಂಬೈಗೆ ಅಪ್ಪಳಿಸುತ್ತಿರುವ ಮೊದಲ ಚಂಡಮಾರುತ ಇದಾಗಿದ್ದು, ಹಿಂದಿನ ಭಾರಿ ತೀವ್ರ ಸ್ವರೂಪದ ಚಂಡಮಾರುತವು ಮುಂಬೈಗೆ ಅಪ್ಪಳಿಸಿದ್ದು 1891ರಲ್ಲಿ. ನಂತರ ಅರಬ್ಬಿ ಸಮುದ್ರದಲ್ಲಿ ಹಲವು ಚಂಡಮಾರುತಗಳು ರೂಪುಗೊಂಡಿದ್ದವು. ಆದರೆ, ಆವು ಯಾವುವೂ ಮುಂಬೈಗೆ ಅಪ್ಪಳಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT