ಸೋಮವಾರ, ಅಕ್ಟೋಬರ್ 21, 2019
21 °C
ಫಸ್ಟ್‌ ಲುಕ್ ಬಿಡುಗಡೆಗೊಳಿಸಿದ ಸಲ್ಮಾನ್

ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ

Published:
Updated:

ಬಾಲಿವುಡ್‌ನಲ್ಲಿ ಕುತೂಹಲ ಮೂಡಿಸಿರುವ ‘ದಬಾಂಗ್‌ 3’ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ವಿರುದ್ಧ ನಟ ಸುದೀಪ್‌ ತೊಡೆ ತಟ್ಟುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಚಿತ್ರಕ್ಕಾಗಿ ಅವರು ಐವತ್ತಕ್ಕೂ ಹೆಚ್ಚು ದಿನಗಳ ಡೇಟ್‌ ಕೂಡ ನೀಡಿದ್ದಾರೆ.

ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳ ಭಾಷೆಯಲ್ಲಿ ತಯಾರಾಗುತ್ತಿರುವ ಇದರ ಮೇಲೆ ಈಗಾಗಲೇ ನಿರೀಕ್ಷೆ ದುಪ್ಪಟ್ಟಾಗಿದೆ. 

ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸಲ್ಮಾನ್‌ ಖಾನ್‌ ಅವರು ಈ ಚಿತ್ರದ ಸುದೀಪ್‌ ಅವರ ಫಸ್ಟ್‌ಲುಕ್‌ ಅನ್ನು ಬಿಡುಗಡೆ ಮಾಡಿದ್ದಾರೆ. ಕಿಚ್ಚನ ಆ್ಯಂಗ್ರಿ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸುದೀಪ್‌ ನಟನೆಯ ‘ಪೈಲ್ವಾನ್‌’ ಹಾಗೂ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಒಳ್ಳೆಯ ಅಂಕ ಸಿಕ್ಕಿದೆ. ‘ಪೈಲ್ವಾನ್’ ಕುಸ್ತಿ ಕಥೆ ಕುರಿತ ಚಿತ್ರ. ಚೀನಾದಲ್ಲಿಯೂ ಇದರ ಬಿಡುಗಡೆಗೆ ನಿರ್ದೇಶಕ ಕೃಷ್ಣ ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ ಸುದೀಪ್ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸರ್ಬಿಯಾದಲ್ಲಿ 25 ದಿನಗಳ ಕಾಲ ಮೊದಲ ಹಂತದಲ್ಲಿ ಶೂಟಿಂಗ್‌ ನಡೆಸಿದ್ದ ಚಿತ್ರತಂಡ ವಿರಾಮ ತೆಗೆದುಕೊಂಡಿತ್ತು. ಈಗ ಎರಡನೇ ಹಂತದ ಶೂಟಿಂಗ್‌ಗಾಗಿ ಪೋಲೆಂಡ್‌ಗೆ ತೆರಳಿದೆ. ಶಿವಕಾರ್ತಿಕ್‌ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸೂರಪ್ಪಬಾಬು.

ಪೋಲೆಂಡ್‌ನ ವಾರ್ಸಾ ನಗರದಲ್ಲಿ ಸಾಹಸ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ಕಣಲ್ ಕಣ್ಣನ್‌ ಅವರ ಸಾಹಸ ನಿರ್ದೇಶನದಲ್ಲಿ ಚೇಸಿಂಗ್ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ.

ಇದರ ಬಳಿಕ ಹಾಡುಗಳು ಹಾಗೂ ಒಂದಿಷ್ಟು ಮಾತಿನ ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಸಂಪೂರ್ಣ ಶೂಟಿಂಗ್‌ ಪೂರ್ಣವಾಗಲಿದೆ. ಮಡೋನಾ ಸೆಬಾಸ್ಟಿನ್ ಈ ಚಿತ್ರದ ನಾಯಕಿ. ಶ್ರದ್ಧಾ ದಾಸ್, ನವಾಬ್ ಶಾ, ಅಫ್ತಾಬ್ ಶಿವದಾಸನಿ, ರವಿಶಂಕರ್ ತಾರಾಗಣದಲ್ಲಿ ಇದ್ದಾರೆ. 

Post Comments (+)