ಭಾನುವಾರ, ಆಗಸ್ಟ್ 1, 2021
27 °C

ಯೂಟ್ಯೂಬ್ ಚಾನೆಲ್‌ ಆರಂಭಿಸಿದ ನಟಿ ಡೈಸಿ ಶಾ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ನಟ, ನಟಿಯರು ಯೂಟ್ಯೂಬ್‌ ಚಾನೆಲ್‌ ಆರಂಭಿಸುವುದು ಇತ್ತೀಚೆಗೆ ಮಾಮೂಲಿನ ಸಂಗತಿ. ಆಹಾರ, ಜೀವನಶೈಲಿ ಸೇರಿದಂತೆ ಅಭಿಮಾನಿಗಳೊಟ್ಟಿಗೆ ಹಲವು ವಿಷಯಗಳನ್ನು ಈ ಚಾನೆಲ್‌ ಮೂಲಕ ಹಂಚಿಕೊಳ್ಳುತ್ತಾರೆ. ನಟಿ ಡೈಸಿ ಶಾ ಕೂಡ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ. ಯಾರು ಈ ನಟಿ ಎಂದು ತಲೆಕೆಡಿಸಿಕೊಳ್ಳಬೇಡಿ. ಒಂಬತ್ತು ವರ್ಷದ ಹಿಂದೆ ಪ್ರಜ್ವಲ್‌ ದೇವರಾಜ್‌ ನಾಯಕರಾಗಿದ್ದ ‘ಭದ್ರ’ ಸಿನಿಮಾದಲ್ಲಿ ಕಾವ್ಯಾ ಪಾತ್ರ ನಿಭಾಯಿಸಿದ್ದ ನಟಿಯೇ ಈ ಡೈಸಿ. ಇದು ಆಕೆಯ ಮೊದಲ ಕನ್ನಡ ಚಿತ್ರವೂ ಹೌದು.

ಈ ಚಿತ್ರದ ಬಳಿಕ ಆಕೆ ಜಗ್ಗೇಶ್‌ ನಟನೆಯ ‘ಬಾಡಿಗಾರ್ಡ್‌’ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಇದಾದ ನಂತರ ಸುದೀಪ್‌ ನಟನೆಯ ‘ಬಚ್ಚನ್‌’ ಚಿತ್ರದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದರು. ಆರು ವರ್ಷದ ಹಿಂದೆ ತೆರೆಕಂಡ ರಘು ಮುಖರ್ಜಿ ನಾಯಕರಾಗಿದ್ದ ‘ಆಕ್ರಮಣ’ ಚಿತ್ರದಲ್ಲಿ ನಟಿಸಿದ ಬಳಿಕ ಡೈಸಿ ಕನ್ನಡದ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಹಿಂದಿ ಮತ್ತು ಗುಜರಾತಿಯ ಸಿನಿಮಾವೊಂದಲ್ಲಿ ನಟಿಸಿರುವ ಆಕೆ ಫಿಟ್‌ನೆಸ್‌, ಆಹಾರ ಮತ್ತು ಜೀವನಶೈಲಿ ಇತ್ಯಾದಿ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಯೂಟ್ಯೂಬ್‌ ಚಾನೆಲ್‌ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುತ್ತಿದ್ದ ಆಕೆ, ಸ್ವಂತವಾಗಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿರುವ ಉದ್ದೇಶದ ಬಗ್ಗೆ ತನ್ನ ಮೊದಲ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

‘ಡೈಸಿಯ ನಿಜಜೀವನದ ಬಗ್ಗೆ ಹೇಳುವುದೇ ಈ ಚಾನೆಲ್‌ನ ಮೂಲ ಉದ್ದೇಶ. ನಾನು ಏನೆಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಿದೆ. ನನ್ನ ಅಭಿಮಾನಿಗಳನ್ನು ಬಹುಬೇಗ ತಲುಪಲು ಈ ಚಾನೆಲ್‌ ಅನುಕೂಲವಾಗಲಿದೆ. ಇದರ  ಮೂಲಕ ನನ್ನ ಜರ್ನಿ ಆರಂಭಿಸಲು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ ಡೈಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು