ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

VIDEO: ನಟಿ ಅಮೃತಾಗೆ ಡಾಲಿ ಧನಂಜಯ ಪ್ರೇಮ ನಿವೇದನೆ! ನಿಮಗೂ ಇಷ್ಟವಾಗಬಹುದು...

Last Updated 29 ಜನವರಿ 2022, 6:31 IST
ಅಕ್ಷರ ಗಾತ್ರ

’ಮಂಡಿಯೂರಿ ಬೇಡುವೇನು, ಹೃದಯ ಕಾಲಡಿ ಇಡುವೇನು, ತೆಗೆದು ಬಚ್ಚಿಟ್ಟುಕೋ, ಇಲ್ಲ ತುಳಿದು ಕಾಲ್ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ’ ಎಂದು ’ಡಾಲಿ’ ಖ್ಯಾತಿಯ ನಟ ಧನಂಜಯ ನಟಿ ಅಮೃತಾ ಅಯ್ಯಂಗಾರ್‌ಗೆ ’ಪ್ರೇಮ ನಿವೇದನೆ’ ಮಾಡಿದ್ದಾರೆ.

ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ನೂರಾರು ಜನ ಪ್ರೇಕ್ಷಕರ ಎದುರು ನಾಚಿಕೆಯಿಂದಲೇ ಪ್ರಪೋಸ್‌ ಮಾಡಿದ್ದಾರೆ. ಅಮೃತಾ ಕೂಡ ಡಾಲಿಯ ಪ್ರೀತಿಯನ್ನು ಒಪ್ಪಿಕೊಂಡು ತಮ್ಮದೇ ಶೈಲಿಯಲ್ಲಿ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾರೆ. ನಂತರ ಇಬ್ಬರೂ ಪರಸ್ಪರ ತಬ್ಬಿಕೊಂಡು ಡ್ಯಾನ್ಸ್​ ಮಾಡಿದ್ದಾರೆ.

ಧನಂಜಯ ಪ್ರೇಮ ನಿವೇದನೆಯು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಿಜಜೀವನದಲ್ಲೂ ಇವರು ಈಗೇ ಇರಲಿ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ‘ಒಳ್ಳೇ ಜೋಡಿ. ಬೇಗ ಸೇರಲಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಡಾಲಿ ಶುಭಾಶಯಗಳು ಎಂದು ಅನೇಕ ಜನರು ಕಾಮೆಂಟ್‌ ಹಾಕಿದ್ದಾರೆ.

ಧನಂಜಯ ರಿಯಲ್‌ ಆಗಿ ಈ ಪ್ರಪೋಸ್‌ ಮಾಡಿಲ್ಲ, ಬದಲಿಗೆ ’ರೀಲ್’ನಲ್ಲಿ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಟ ಗಣೇಶ್​ ನಡೆಸಿಕೊಡುತ್ತಿರುವ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮದ ಸನ್ನಿವೇಶವೊಂದರಲ್ಲಿ ಡಾಲಿ ಪ್ರೇಮ ನಿವೇದನೆ ಮಾಡಿದ್ದಾರೆ.

‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮ ಬದುಕಿನ ಉತ್ತಮ ಗೆಳೆಯರ ಬಗ್ಗೆ ಮಾತನಾಡುವ ಕಾರ್ಯಕ್ರಮವಾಗಿದೆ. ಈ ಸಲ ಇದರಲ್ಲಿ ಡಾಲಿ ಮತ್ತು ಅಮೃತಾ ಭಾಗಹಿಸಿದ್ದರು. ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮ ಮೂಡಿಬರುತ್ತಿದೆ.

ಡಾಲಿ ಮತ್ತು ಅಮೃತಾ ‘ಪಾಪ್​ ಕಾರ್ನ್​ ಮಂಕಿ ಟೈಗರ್​’ ಹಾಗೂ ‘ಬಡವ ರಾಸ್ಕಲ್’ ಸಿನಿಮಾಗಳಲ್ಲಿ ಇಬ್ಬರು ತೆರೆಹಂಚಿಕೊಂಡಿದ್ದಾರೆ. ನಿಜಜೀವನದಲ್ಲೂ ಇವರು ಒಳ್ಳೆಯ ಗೆಳೆಯರಾಗಿದ್ದಾರೆ. ​

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT