ಮಂಗಳವಾರ, ಸೆಪ್ಟೆಂಬರ್ 17, 2019
21 °C

ಡಾಲಿ ಲಿಕ್ಕರ್‌ ಅಂಗಡಿ ತೆರೆದ ಧನಂಜಯ್ ಅಭಿಮಾನಿ!

Published:
Updated:

ಸೂರಿ ನಿರ್ದೇಶನದ ‘ಟಗರು’ ಸಿನಿಮಾದ ‘ಡಾಲಿ’ ಪಾತ್ರ ನಟ ಧನಂಜಯ್‌ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ್ದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತು. ಬಿಯರ್‌ ಹೀರುತ್ತಾ ‘ಟಗರು’ ಚಿತ್ರದಲ್ಲಿ ಧನಂಜಯ್‌ ಅವರು ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ವಿರುದ್ಧ ಅಬ್ಬರಿಸಿದ್ದರು. ಖಡಕ್‌ ಡೈಲಾಗ್‌ಗಳ ಮೂಲಕ ಪ್ರೇಕ್ಷಕರ ಮನಕ್ಕೂ ಲಗ್ಗೆ ಇಟ್ಟಿದ್ದರು. 

ಇತ್ತೀಚೆಗೆ ಸ್ವಂತ ಬ್ಯಾನರ್‌ ಆರಂಭಿಸಿರುವ ಧನಂಜಯ್‌ ಅದಕ್ಕೆ ‘ಡಾಲಿ ಪಿಕ್ಚರ್‌’ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ, ‘ಡಾಲಿ’ ಹೆಸರಿನ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ ‘ಪಾಪ್ ಕಾರ್ನ್‌ ಮಂಕಿ ಟೈಗರ್‌’, ‘ಸಲಗ’, ‘ಬಡವ ರ‍್ಯಾಸ್ಕಲ್’, ಮತ್ತು ‘ಯುವರತ್ನ’ ಚಿತ್ರಗಳಿವೆ.  

ಆದರೆ, ಸುದ್ದಿ ಅದಲ್ಲ. ಮದ್ಯದ ಅಂಗಡಿಗೆ ‘ಡಾಲಿ ಲಿಕ್ಕರ್‌’ ಎಂದು ಹೆಸರಿಟ್ಟಿರುವ ಫೋಟೊ ವೈರಲ್‌ ಆಗಿದೆ. ಈ ಚಿತ್ರವನ್ನು ಧನಂಜಯ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನಾನು ‘Daali pictures’ ಮಾಡ್ಕಂಡಿದ್ರೆ, ಅಭಿಮಾನಿ ದೇವರು ಯಾರೊ ‘Daali liquors’ ಮಾಡ್ಕಂಡವ್ರೆ. ಒಳ್ಳೇದಾಗಲಿ😄’ ಎಂದು ಬರೆದುಕೊಂಡಿದ್ದಾರೆ.

Post Comments (+)