‘ಲವ್ ಮಾಕ್ಟೇಲ್’ ಚಿತ್ರದ ಯಶಸ್ಸಿನ ಖುಷಿಯಲ್ಲಿ ಇರುವ ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಮನಸ್ಸಿನಲ್ಲಿ ಕನಿಷ್ಠ ಎರಡು ಹೊಸ ಕಥೆಗಳು ಚಿಗುರಿ ಕುಳಿತಿವೆ. ಆದರೆ, ಯಾವ ಕಥೆಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುವುದು ಎಂಬ ವಿಚಾರದಲ್ಲಿ ಅವರು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಜನವರಿ 31ರಂದು ತೆರೆಗೆ ಬಂದ ‘ಲವ್ ಮಾಕ್ಟೇಲ್’ ಚಿತ್ರವು ಐದು ವಾರಗಳಿಂದ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಕೃಷ್ಣ ಅವರು ‘ಎರಡರಿಂದ ಮೂರು ಕಥೆಗಳಿಗೆ ಸಂಬಂಧಿಸಿದ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಇವೆ. ಆದರೆ, ಇವುಗಳಲ್ಲಿ ಯಾವುದನ್ನು ನಾನು ಸಿನಿಮಾ ರೂಪಕ್ಕೆ ತರುತ್ತೇನೆ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಹೇಳಿದರು.

ಕೃಷ್ಣ ಅಭಿನಯಿಸಿರುವ ‘ಲೋಕಲ್ ಟ್ರೇನ್’ ಚಿತ್ರವು ಬಹುತೇಕ ಸಿದ್ಧವಾಗಿದೆಯಂತೆ. ಇದು ಕಾಲೇಜಿನಲ್ಲಿ ನಡೆಯುವ ಪ್ರೀತಿಯ ಕಥೆಯನ್ನು ಹೊಂದಿದೆ. ಹಾಗೆಯೇ, ‘ವರ್ಜಿನ್’ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಇದು ಕಾಲೇಜು ನಂತರದ ಜೀವನದಲ್ಲಿ ನಡೆಯುವ ಪ್ರೀತಿಯ ಕಥೆಯನ್ನು ಹೊಂದಿದೆ.

‘ಲವ್ ಮಾಕ್ಟೇಲ್ ಚಿತ್ರ ನಿರ್ದೇಶಿಸುವ ಹೊತ್ತಿನಲ್ಲಿ ನನ್ನ ಮೇಲೆ ನಿರೀಕ್ಷೆಯ ಭಾರ ಇರಲಿಲ್ಲ. ಆದರೆ, ಈಗ ಆ ಭಾರ ಹೆಚ್ಚಿದೆ’ ಎಂದರು ಕೃಷ್ಣ. ತಾವೇ ನಿರ್ದೇಶನ ಮಾಡುವುದಲ್ಲದೆ, ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುವ ವಿಚಾರವಾಗಿ ಪ್ರಶ್ನಿಸಿದಾಗ, ‘ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ. ಕಥೆ ಚೆನ್ನಾಗಿದ್ದರೆ ಮಾತ್ರ ಅಭಿನಯಿಸುವೆ’ ಎಂದು ಉತ್ತರಿಸಿದರು.

ಅಂದಹಾಗೆ, ‘ಲವ್ ಮಾಕ್ಟೇಲ್’ ಚಿತ್ರದ ಹಿಂದಿ, ತಮಿಳು ಮತ್ತು ತೆಲುಗು ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.